ಅಪರಾಧಿ ಪರ ವಿಚಾರಣೆಗೆ ಹಾಜರಾಗದ ವಕೀಲರ ವಿರುದ್ಧ ಕ್ರಮ: ಹೈಕೋರ್ಟ್
ಬೆಂಗಳೂರು, ಜ.10: ಕೊಲೆಯೊಂದರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿ ಕುಮಾರ್ ಜೀವಾವಧಿ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಆದರೆ, ಅರ್ಜಿದಾರರ ಪರ ವಕೀಲ ಮುಜಾಫರ್ ಅಹ್ಮದ್, ಕುಮಾರ್ ಪರವಾಗಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ, ಅಹ್ಮದ್ ವಿರುದ್ಧ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ನಿರ್ದೇಶಿಸಿದೆ.
ಕೊಲೆಯೊಂದರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ನ್ಯಾಯಾಲಯವು ಕುಮಾರ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿತ್ತು. ಈ ಆದೇಶ ರದ್ದುಕೋರಿ ಅಪರಾಧಿ ಕುಮಾರ್, ಮುಜಾಫರ್ ಅಹ್ಮದ್ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಹ್ಮದ್ ಅವರು ಬಹಳ ದಿನಗಳಿಂದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ನ್ಯಾಯಪೀಠ, ಕುಮಾರ್ ಪರ ವಕೀಲ ಮುಜಾಫರ್ ಅಹ್ಮದ್ ವಿರುದ್ಧ ರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿತು.
ಅರ್ಜಿದಾರ ಕುಮಾರ್ ಪರ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕುಮಾರ್‌ಗೆ ಮಾನಸಿಕ ತೊಂದರೆ, ತೀವ್ರವಾಗಿ ಬೇಸರವೂ ಆಗಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.