‘ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್ ’ ಕಾಫಿ ಶಾಪ್‌ನ ಮಳಿಗೆ ಆರಂಭ

Update: 2018-01-10 18:45 GMT

ರಾಸ್ ಅಲ್ ಖೈಮಾ, ಜ.10: ಯುಎಇ ಮೂಲದ ಖ್ಯಾತ ಅಂತಾರಾಷ್ಟ್ರೀಯ ಬ್ರಾಂಡ್ ಕಾಫಿ ಮಳಿಗೆ ‘ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್’ನ ನೂತನ ಮಳಿಗೆಯನ್ನು ಆಲ್ ದಾಹಿತ್‌ನ ರಾಸ್ ಅಲ್ ಖೈಮಾದಲ್ಲಿರುವ ಮೈ ಸಿಟಿ ಸೆಂಟರ್‌ನಲ್ಲಿ ಆರಂಭಿಸಲಾಗಿದೆ.

ಬಿ.ಎ. ಸಮೂಹ ಸಂಸ್ಥೆ (ಭಾರತ)ಯ ಅಧ್ಯಕ್ಷ ಡಾ. ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ನೂತನ ಮಳಿಗೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್, ತುಂಬೆ ಸಮೂಹ ಸಂಸ್ಥೆಯ ನಿರ್ದೇಶಕ ಫರ್ಹಾದ್ ಸಿ ಹಾಗೂ ತುಂಬೆ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು.

ಈ ಕಾಫಿ ಬ್ರಾಂಡ್ ವಿಶ್ವದ ಮನ್ನಣೆಗಳಿಸುವ ವಿಶ್ವಾಸವಿದೆ. 2020ರ ವೇಳೆಗೆ ‘ಬ್ಲೆಂಡ್ಸ್ ಆ್ಯಂಡ್ ಬ್ರೀವ್ಸ್ ’ ಕಾಫಿ ಶಾಪ್‌ನ 100 ಮಾರಾಟ ಮಳಿಗೆಗಳನ್ನು ಆರಂಭಿಸುವ ಯೋಜನೆಯಿದೆ. ಭಾರತ ಹಾಗೂ ‘ಎಂಇಎನ್‌ಎ’ ಪ್ರದೇಶದಲ್ಲಿ ಫ್ರಾಂಚೈಸಿ ಕೊಡುಗೆ ನೀಡುವ ಮೂಲಕ ಪಾಲುದಾರಿಕೆ ಅವಕಾಶ ನೀಡಲಾಗುವುದು ಎಂದು ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News