ಚಿನ್ನ ಖರೀದಿಗೆ ‘ಫೋನ್ ಪೇ’ ಗೋಲ್ಡ್: ಹೇಮಂತ್

Update: 2018-01-12 13:06 GMT

ಬೆಂಗಳೂರು,ಜ.12: ಡಿಜಿಟಲ್ ಹಣ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ‘ಫೋನ್ ಪೇ’ ಸಂಸ್ಥೆ ಗ್ರಾಹಕರ ಅನುಕೂಲಕ್ಕಾಗಿ ‘ಫೋನ್ ಪೇ ಗೋಲ್ಡ್’ ಸೇವೆಯನ್ನು ಆರಂಭಿಸಿದ್ದು, ಮೊಬೈಲ್ ಆ್ಯಪ್ ಮೂಲಕವೇ ಪ್ರಮಾಣಿಕೃತ 24 ಕ್ಯಾರೆಟ್ ಚಿನ್ನ ಪಾರದರ್ಶಕ ಬೆಲೆಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥ ಹೇಮಂತ್ ಗಾಲಾ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋನ್ ಪೇ ಗ್ರಾಹಕರು 1 ರೂ.ಕನಿಷ್ಟ ಬೆಲೆಯಲ್ಲಿಯೂ ಚಿನ್ನ ಖರೀದಿಸಲು ಅವಕಾಶ ಕಲ್ಪಿಸಿದೆ. ಗ್ರಾಹಕರು ಫೋನ್ ಪೇ ಗೋಲ್ಡ್ ಖಾತೆಯನ್ನು ರಚಿಸಬಹುದು ಮತ್ತು ಪ್ರತಿಕ್ಷಣದ ಚಿನ್ನದ ಬೆಲೆಯನ್ನು ಪರಿವೀಕ್ಷಿಸಿ ಪಾರದರ್ಶಕ ಬೆಲೆಗಳಲ್ಲಿ ಖರೀದಿಸಬಹುದು ಎಂದು ಹೇಳಿದರು.

ಖರೀದಿಸಿದ ಚಿನ್ನವನ್ನು ಗಟ್ಟಿರೂಪದಲ್ಲಿ ಬ್ರಿಂಕ್ಸೃ್ ವಾಲ್ಟ್‌ನಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ವಿಮೆ ಮೂಲಕ ಸದಾ ಸುರಕ್ಷಿತವಾಗಿರಿಸಲಾಗುತ್ತದೆ. ಒಂದು ವೇಳೆ ಗ್ರಾಹಕರಿಗೆ ಭೌತಿಕ ಚಿನ್ನದ ಅಗತ್ಯವಿದ್ದಲ್ಲಿ, ಅದನ್ನು ಅವರ ಮನೆಗೆ ಬಾಗಿಲಿಗೆ ತಲುಪಿಸಲು ಕೋರಬಹುದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News