ಅಕ್ರಮ ಬಾರ್‌ಗೆ ಕಡಿವಾಣ ಹಾಕಲು ಆಗ್ರಹ

Update: 2018-01-12 13:08 GMT

ಬೆಂಗಳೂರು, ಜ.12: ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಸ್ಥೆಯಲ್ಲಿ ಅಕ್ರಮವಾಗಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ನಾಗರಿಕರ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಕೇಶವಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಈ ಸಂಸ್ಥೆಯ ಮೂಲಕ ಬಡಾವಣೆಯ ಹಲವು ಗಣ್ಯರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು. ಆದರೆ, ಹಿರಿಯರ ನಿಧನದ ನಂತರ ಭಾರತ್ ವಿದ್ಯಾ ಸಂಸ್ಥೆಯ ಎಲ್ಲ ಅಧ್ಯಾಪಕ ವೃಂದದವರು ಸದಸ್ಯರಾಗಿ ಮೊದಲಿಗೆ ಇಸ್ವೀಟ್ ಆಡುವುದಕ್ಕೆ ಅವಕಾಶ ನೀಡಿದರು. ಅನಂತರ ಬಾರ್ ಅಂಡ್ ರೆಸ್ಟೋರೆಂಟ್ ಆರಂಭ ಮಾಡಿದ್ದಾರೆ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸಮುದಾಯ ಭವನ ಉದ್ದೇಶಕ್ಕಾಗಿ ಸಿ.ಎ.ನಿವೇಶನವನ್ನು ನೀಡಲಾಗಿತ್ತು. ಸಾಂಸ್ಕೃತಿಕ ಚಟುವಟಿಕೆಗಳು ಹೊರತು ಪಡಿಸಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಅವಕಾಶವಿರಲಿಲ್ಲ. ಒಂದು ವೇಳೆ ನಡೆಸಬೇಕಾದರೆ ಬಿಡಿಎಯಿಂದ ಅನುಮತಿ ಪಡೆಯಬೇಕಾಗಿರುತ್ತದೆ. ಆದರೆ, ಜೆಸಿಸಿಎ ಸಂಸ್ಥೆಯವರು ತಮಗೆ ಇಷ್ಟ ಬಂದಂತೆ ಅಕ್ರಮವಾಗಿ ಇಲ್ಲಸಲ್ಲದ ಚಟುವಟಿಕೆಗಳನ್ನು ಅಳವಡಿಸಿ ಕಾನೂನು ಬಾಹಿರವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಬಿಡಿಎ ಹಾಗೂ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ. ಆದುದರಿಂದ ಕೂಡಲೇ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News