ವಾಟ್ಸ್ಆ್ಯಪ್ ನಿಂದ ಹೊಸ ಫೀಚರ್ : ಪ್ರತಿಯೊಬ್ಬ ಬಳಕೆದಾರನಿಗೂ ಇದು ತಿಳಿದಿರಬೇಕು

Update: 2018-01-13 08:20 GMT

ಹೊಸದಿಲ್ಲಿ,ಜ.13 :  ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿರುವ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಗ್ರೂಪ್ ಒಂದರಿಂದ ತಾನು ಹೊರ ಹೋಗದೆ  ಗ್ರೂಪ್ ಅಡ್ಮಿನ್ ಒಬ್ಬ ತನ್ನ ಗ್ರೂಪ್ ನಿಂದ ಇನ್ನೊಬ್ಬ ಅಡ್ಮಿನ್ ನನ್ನು ನೇಮಕಗೊಳಿಸಬಹುದಾದ ಫೀಚರ್  ಇದಾಗಿದೆ.

ಸದ್ಯ ಇರುವ ವಾಟ್ಸ್ಆ್ಯಪ್ ಫೀಚರ್ ನಲ್ಲಿ  ಒಬ್ಬ ಅಡ್ಮಿನ್ ಇನ್ನೊಬ್ಬನನ್ನು ತನ್ನ ಸ್ಥಾನಕ್ಕೆ ಕೂರಿಸಬೇಕಾದರೆ  ಆತ ಗ್ರೂಪ್ ನಿಂದ ಸಂಪೂರ್ಣ ಹೊರಹೋಗಬೇಕಾಗಿದೆ. ಆದರೆ ಈಗ ಅಭಿವೃದ್ಧಿಪಡಿಸಲಾದ ಹೊಸ ಫೀಚರ್ ನಲ್ಲಿ ಅಡ್ಮಿನ್ ಒಬ್ಬ ಬೇರೊಬ್ಬನನ್ನು ಅಡ್ಮಿನ್ ಮಾಡಬೇಕೆಂದಿದ್ದರೆ ಆತ ಗ್ರೂಪ್ ನಲ್ಲಿದ್ದುಕೊಂಡೇ ಮಾಡಬಹುದಾಗಿದೆ.

ಹೊಸ ಫೀಚರ್ ನಂತೆ 'ಡಿಸ್ಮಿಸ್ ಆಸ್ ಅಡ್ಮಿನ್' ಆಪ್ಶನ್ ಇರುತ್ತದೆ. ಈ ಆಪ್ಶನ್  ಗ್ರೂಪ್ ಇನ್ಫೋ ಸೆಕ್ಷನ್ ನಲ್ಲಿ ಲಭ್ಯವಿದೆ. ಸದ್ಯ ಈ ಹೊಸ ಫೀಚರ್ ಅನ್ನು ವಾಟ್ಸ್ಆ್ಯಪ್ ತನ್ನ ಐಒಎಸ್ ಗಾಗಿ ಅಭಿವೃದ್ಧಿ ಪಡಿಸಿದ್ದು ಮುಂದೆ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ ಈಗ ಲೇಟೆಸ್ಟ್ ಆಂಡ್ರಾಯ್ಡ್ 2.18.1 ಬಳಕೆದಾರರಿಗೆ  ವಾಟ್ಸ್ಆ್ಯಪ್ ಗೂಗಲ್ ಪ್ಲೇ ಬೇಟಾದಲ್ಲಿ ಲಭ್ಯವಿದೆ.

ಗ್ರೂಪ್ ಅಡ್ಮಿನ್ ಗಳ ಅಧಿಕಾರವನ್ನು ಹೆಚ್ಚಿಸಿ ಅವರು ಇತರ ಸದಸ್ಯರು ಕಳುಹಿಸುವ ಅನಗತ್ಯ  ಸಂದೇಶಗಳನ್ನು ಹಾಗೂ ಚಿತ್ರಗಳನ್ನು ನಿಯಂತ್ರಿಸುವ ಅಧಿಕಾರ ಹೊಂದುವಂತೆ ಮಾಡುವ ಬಗ್ಗೆಯೂ ವಾಟ್ಸ್ಆ್ಯಪ್ ಚಿಂತಿಸುತ್ತಿದೆ. ವಾಯ್ಸ್ ಕಾಲ್ ನಿಂದ ವೀಡಿಯೋ ಕಾಲ್ ಗೆ ಶಿಫ್ಟ್ ಮಾಡುವಂತಹ ಕ್ವಿಕ್ ಸ್ವಿಚ್ ಫೀಚರ್ ಕೂಡ ವಾಟ್ಸ್ಆ್ಯಪ್ ಅಭಿವೃದ್ಧಿ ಪಡಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News