×
Ad

ವೈಶ್ಯ ಸಮುದಾಯದ ಅಭಿವೃದ್ಧಿಯಲ್ಲಿ ಎಂ.ಆರ್.ಆರ್ಯ ಕೊಡುಗೆ ಅಪಾರ: ಪಿ.ಸಿ.ಬಾಲರಾಜು

Update: 2018-01-14 20:32 IST

ಬೆಂಗಳೂರು, ಜ.14: ವೈಶ್ಯ ಸಮುದಾಯದ ಬೆಳವಣಿಗೆಯಲ್ಲಿ ಎಂ.ಆರ್.ಆರ್ಯರವರ ಕೊಡುಗೆ ಅಪಾರವೆಂದು ಎಂ.ಆರ್.ಆರ್ಯ ಪ್ರತಿಷ್ಟಾನದ ಅಧ್ಯಕ್ಷ ಪಿ.ಸಿ.ಬಾಲರಾಜು ಹೇಳಿದರು.

ರವಿವಾರ ಎಂ.ಆರ್.ಆರ್ಯ ಪ್ರತಿಷ್ಟಾನದ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೈಶ್ಯ ಬ್ಯಾಂಕ್ ಇತರೆ ರಾಷ್ಟ್ರೀಯ ಬ್ಯಾಂಕ್‌ಗಳಂತೆ ಸದೃಢಗೊಳ್ಳಲು ಪ್ರಮುಖ ಕಾರಣಕರ್ತರಾಗಿದ್ದರು ಎಂದು ಸ್ಮರಿಸಿದರು.

ಆರ್ಯವೈಶ್ಯ ಸಮಾಜದಲ್ಲಿ ಬೇರು ಬಿಟ್ಟಿದ್ದ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಪ್ರಮುಖ ಕಾರಣಕರ್ತರಾದರು. ಹಾಗೂ ರಾಜ್ಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದ ಸಂಘ, ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಅವರು, ಆರ್ಥಿಕ ಹಾಗೂ ನೈತಿಕ ಬೆಂಬಲವನ್ನು ಕೊಡುತ್ತಿದ್ದರು. ಯುವಕರಿಗೆ ಸದಾ ಸ್ಫೂರ್ತಿಯ ಚಿಲುಮೆಯಂತಿದ್ದರು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಸ್.ಪಿ.ಶಂಕರ್ ಮರಣ ದಂಡನೆ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಎಂ.ಆರ್.ಆರ್ಯ ಪ್ರತಿಷ್ಠಾನದ ಎಂ.ಸುಂದರೇಶ್ ಆರ್ಯ, ಡಿ.ಸುರೇಶ್‌ಬಾಬು, ಅಂಜನ್‌ಶೆಟ್ಟಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News