ಬಾಲಕಿಯ ಅತ್ಯಾಚಾರಗೈದು, ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

Update: 2018-01-14 18:21 GMT

ರೋಟಕ್, ಜ. 14: ಅತ್ಯಾಚಾರಕ್ಕೊಳಗಾದ ಬಾಲಕಿಯೋರ್ವಳ ಮೃತದೇಹ ಹರ್ಯಾಣದ ಜಿಂದ್‌ನಲ್ಲಿ ಪತ್ತೆಯಾಗಿದೆ. ಜಿಂದ್‌ನ ಸಫಿಡೋನ್ ಪಟ್ಟಣದ ಬುಧಖೇರ ಗ್ರಾಮದ ಕಾಲುವೆ ಸಮೀಪ ಶುಕ್ರವಾರ ರಾತ್ರಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯನ್ನು ಕುರುಕ್ಷೇತ್ರದ ಝಾನ್ಸಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಬಾಲಕಿ ಜನವರಿ 9ರಂದು ನಾಪತ್ತೆಯಾಗಿದ್ದಳು.

ಬಾಲಕಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಇತ್ತು ಬಾಲಕಿಯ ಖಾಸಗಿ ಭಾಗ ಹಾಗೂ ಯಕೃತ್ತನ್ನು ಛಿದ್ರಗೊಳಿಸಲಾಗಿದೆ. ಮೃತದೇಹವನ್ನು ರೋಹ್ಟಕ್‌ನ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಮುಖ, ಬಾಯಿಯ ಒಳಗೆ ಗಾಯಗಳಿವೆ. ಯಕೃತ್ತು ಹಾಗೂ ಖಾಸಗಿ ಭಾಗಗಳಿಗೆ ಘಾಸಿ ಮಾಡಲಾಗಿದೆ. ಆದುದರಿಂದ ಬಾಲಕಿಯನ್ನು ಗುಂಪೊಂದು ಅಪಹರಿಸಿ ಅತ್ಯಾಚಾರಗೈದಿರುವ ಸಾಧ್ಯತೆ ಇದೆ ಎಂದು ಸಂಸ್ಥೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಎಸ್.ಕೆ. ದತ್ತಾತ್ರೇಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News