×
Ad

ಬೆಂಗಳೂರು: ಕಾನ್ಸ್‌ಟೆಬಲ್ ಮೇಲೆ ಬೈಕ್ ಹರಿಸಲು ಯತ್ನ

Update: 2018-01-15 20:01 IST

ಬೆಂಗಳೂರು, ಜ.15: ವಾಹನ ತಪಾಸಣೆ ವೇಳೆ ಆ್ಯಕ್ಟೀವ್ ಹೋಂಡಾ ಬೈಕ್ ನಿಲ್ಲಿಸುವಂತೆ ಇಬ್ಬರು ಕಾನ್ಸ್‌ಟೆಬಲ್ಸ್‌ಗಳು ಸೂಚಿಸಿದರೂ ಬೈಕ್‌ನ್ನು ಇವರ ಮೇಲೇ ಹತ್ತಿಸಲು ಯತ್ನಿಸಿದಾಗ ಕಾನ್ಸ್‌ಟೆಬಲ್‌ವೊಬ್ಬರು ಗಾಯಗೊಂಡಿರುವ ಘಟನೆ ಐಡಿಯಲ್ ಹೋಂ ಲೇಔಟ್‌ನಲ್ಲಿ ನಡೆದಿದೆ.

ರಾತ್ರಿ ಪಾಳಿಯಲ್ಲಿದ್ದ ರಾಜರಾಜೇಶ್ವರಿನಗರ ಠಾಣೆ ಕಾನ್ಸ್‌ಟೆಬಲ್ ಗಳಾದ ನಾಗರಾಜ್ ಮತ್ತು ಗಂಗಾಧರ್ ಎಂಬುವರು ಐಡಿಯಲ್ ಹೋಂ ಲೇಔಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು.
    
ಬೆಳಗಿನ ಜಾವ 1.30ರಲ್ಲಿ ಆ್ಯಕ್ಟೀವ್ ಹೋಂಡಾ ಬೈಕ್‌ನಲ್ಲಿ ಇಬ್ಬರು ಸವಾರರು ಅನುಮಾನಾಸ್ಪದವಾಗಿ ಬರುತ್ತಿದ್ದಾಗ ಇವರನ್ನು ತಡೆಯಲು ಮುಂದಾಗಿದ್ದಾರೆ. ಆದರೆ, ಸವಾರರು ವಾಹನ ನಿಲ್ಲಿಸದೆ ಕಾನ್ಸ್‌ಟೆಬಲ್‌ಗಳ ಮೇಲೆಯೇ ಹರಿಸಲು ಮುಂದಾದಾಗ ನಾಗರಾಜ್ ಕೆಳಗೆ ಬಿದ್ದಿದ್ದು, ಸವಾರ ಪರಾರಿಯಾಗಿದ್ದಾನೆ. ಘಟನೆಯಿಂದಾಗಿ ನಾಗರಾಜ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News