ಸಹಾ ಗಾಯಾಳು; ಅಂತಿಮ ಟೆಸ್ಟ್‌ಗೆ ಕಾರ್ತಿಕ್‌ಗೆ ಸ್ಥಾನ

Update: 2018-01-16 18:56 GMT

ಹೊಸದಿಲ್ಲಿ, ಜ.16: ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್‌ಗೆ ಗಾಯಾಳು ವೃದ್ಧಿಮಾನ್ ಸಹಾ ಬದಲಿಗೆ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ. ಜ.11ರಂದು ಅಭ್ಯಾಸ ನಡೆಸುತ್ತಿದ್ದಾಗ ಸಹಾ ಅವರಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ ಸಹಾ ಬದಲಿಗೆ ಎರಡನೇ ಟೆಸ್ಟ್ ಗೆ ಪಾರ್ಥಿವ್ ಪಟೇಲ್ ಅವರು ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಪಾರ್ಥಿವ್ ಪಟೇಲ್ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಪಾರ್ಥಿವ್ ಪಟೇಲ್‌ಗೆ ಅಂತಿಮ ಟೆಸ್ಟ್‌ಗೆ ಅವಕಾಶ ನಿರಾಕರಿಸಲಾಗಿದೆ. ಇದೀಗ ಸಹಾ ಅವರು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ತಂಡಕ್ಕೆ ಆಯ್ಕೆ ಮಾಡಿದೆ. 32ರ ಹರೆಯದ ದಿನೇಶ್ ಕಾರ್ತಿಕ್ ಅವರು ಟೀಮ್ ಇಂಡಿಯಾದ ಪರ 23 ಟೆಸ್ಟ್‌ಗಳನ್ನು ಆಡಿದ್ದಾರೆ. 1 ಶತಕ ಮತ್ತು 7 ಅರ್ಧಶತಕಗಳನ್ನು ಒಳಗೊಂಡ 1 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. 2004ರಲ್ಲಿ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದ ಕಾರ್ತಿಕ್ ಚಿತ್ತಗಾಂಗ್‌ನಲ್ಲಿ 2010, ಜ.17ರಿಂದ 21ರ ತನಕ ನಡೆದ ಟೆಸ್ಟ್‌ನಲ್ಲಿ ಕೊನೆಯ ಬಾರಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News