ಸರ್ವಿಸಸ್ ವಿರುದ್ಧ ದಿಲ್ಲಿ ಜಯಭೇರಿ

Update: 2018-01-16 18:58 GMT

ಹೊಸದಿಲ್ಲಿ, ಜ.16: ನಾಯಕ ರಿಷಬ್ ಪಂತ್ ಅರ್ಧಶತಕ ಹಾಗೂ ಖೆಜ್ರೋಲಿಯಾ(3-38) ಉತ್ತಮ ಬೌಲಿಂಗ್ ನೆರವಿನಿಂದ ಆತಿಥೇಯ ದಿಲ್ಲಿ ತಂಡ ಸರ್ವಿಸಸ್ ವಿರುದ್ಧ 22 ರನ್‌ಗಳ ರೋಚಕ ಜಯ ದಾಖಲಿಸಿದೆ.

ಮಂಗಳವಾರ ಇಲ್ಲಿ ನಡೆದ ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ಉತ್ತರ ವಲಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಿಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 225 ರನ್ ಗಳಿಸಿತು. ಪಂತ್(64,32 ಎಸೆತ, 11 ಬೌಂಡರಿ, 1 ಸಿಕ್ಸರ್) ಹಾಗೂ ರಂಜನ್(25) ಮೊದಲ ವಿಕೆಟ್‌ಗೆ 90 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು.

ಗೆಲ್ಲಲು 226 ರನ್ ಗುರಿ ಪಡೆದ ಸರ್ವಿಸಸ್ ತಂಡ ಉತ್ತಮ ಹೋರಾಟ ನೀಡಿದರೂ 19.1 ಓವರ್‌ಗಳಲ್ಲಿ 203 ರನ್ ಗಳಿಸಿ ಆಲೌಟಾಯಿತು. ಆರಂಭಿಕ ಆಟಗಾರ ರವಿ ಚೌಹಾಣ್(53) ಹಾಗೂ ನಕುಲ್ ಶರ್ಮ(53)ಸರ್ವಿಸಸ್ ಹೋರಾಟಕ್ಕೆ ಬಲ ನೀಡಿದರು. ಆದರೆ, ಖೆಜ್ರೊಲಿಯಾ(3-38), ಟೊಕಾಸ್(2-36) ಹಾಗೂ ಪ್ರದೀಪ್ ಸಾಂಗ್ವಾನ್(2-42) ಸರ್ವಿಸಸ್ ಗೆಲುವಿಗೆ ಅಡ್ಡಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News