ದ್ವಿತೀಯ ಟೆಸ್ಟ್: ಸೆಂಚೂರಿಯನ್ ನಲ್ಲಿ ಭಾರತಕ್ಕೆ ಸೋಲು

Update: 2018-01-17 10:29 GMT

ಸೆಂಚೂರಿಯನ್, ಜ.17: ದ.ಆಫ್ರಿಕಾ ವಿರುದ್ಧದ 2ನೆ ಟೆಸ್ಟ್ ನಲ್ಲಿ ಭಾರತ ತಂಡವು ಸೋಲುಂಡಿದೆ. ಈ ಮೂಲಕ ದ.ಆಫ್ರಿಕಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 285 ರನ್ ಗುರಿ ಪಡೆದಿದ್ದ ಭಾರತ ಐದನೇ ಹಾಗೂ ಅಂತಿಮ ದಿನವಾದ ಮಂಗಳವಾರ 3 ವಿಕೆಟ್ ನಷ್ಟಕ್ಕೆ 35 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಭಾರತದ ಪರ ಬ್ಯಾಟ್ಸ್ ಮ್ಯಾನ್ ಗಳ್ಯಾರೂ ಹೆಚ್ಚು ಸಮಯ ಕ್ರೀಸ್ ನಲ್ಲಿ ಉಳಿಯಲಿಲ್ಲ. ಭಾರತ 151 ರನ್ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕ ಪರ ಲುಂಗಿಸಾನಿ ನಗಿಡಿ 39 ರನ್ ಗಳಿಗೆ 6 ವಿಕೆಟ್ ಪಡೆದು ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News