'ಹಿಫ್ಝುಲ್ ಕುರ್‌ಆನ್’ ರಾಜ್ಯಮಟ್ಟದ ಸ್ಪರ್ಧೆ: ನೂರುಲ್ ಅಮೀನ್ ಅನ್ವರ್
ಬೆಂಗಳೂರು, ಜ.17: ಮದ್ರಸಾಗಳಲ್ಲಿ ಪವಿತ್ರ ಕುರ್‌ಆನ್ ಅನ್ನು ಕಂಠಪಾಠ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸಿ.ಟಿ.ಮಾರುಕಟ್ಟೆ ಜಾಮಿಯಾ ಮಸ್ಜಿದ್‌ನಲ್ಲಿ ಜ.24 ರಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಾಮಿಯಾ ಮಸ್ಜಿದ್ ಮುಸ್ಲಿಮ್ ಚಾರಿಟೇಬಲ್ ಫಂಡ್ ಟ್ರಸ್ಟ್ ಕಾರ್ಯದರ್ಶಿ ಸೈಯ್ಯದ್ ನೂರುಲ್ ಅಮಿನ್ ಅನ್ವರ್ ತಿಳಿಸಿದ್ದಾರೆ.
ಬುಧವಾರ ನಗರದ ಸಿಟಿ ಮಾರುಕಟ್ಟೆ ಜಾಮಿಯಾ ಮಸ್ಜಿದ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.24ರಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ಸ್ಪರ್ಧೆಯು ಜ.25ರಂದು ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು ಎಂದರು.
ಈಗಾಗಲೆ ಸುಮಾರು 84 ವಿದ್ಯಾರ್ಥಿಗಳ ಹೆಸರನ್ನು ಸಂಬಂಧಪಟ್ಟ ಮದ್ರಸಾಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿವೆ. ಜ.20ರವರೆಗೆ ಹೆಸರುಗಳನ್ನು ಕಳುಹಿಸಿಕೊಡಬಹುದಾಗಿದೆ. ಇಂತಹ ಸ್ಪರ್ಧೆಯನ್ನು ಈ ಹಿಂದೆ 2009ರಲ್ಲಿ ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ಅಲೀಮ್‌ಉಲ್ಲಾಖಾನ್, ವೌಲಾನ ಮಖ್ಸೂದ್ ಇಮ್ರಾನ್ ರಶಾದಿ, ವೌಲಾನ ಮುಹಮ್ಮದ್ ಝಮೀರ್ ಅಹ್ಮದ್ ಸಿದ್ದೀಖಿ, ಟ್ರಸ್ಟಿ ನ್ಯಾಯವಾದಿ ಅಬ್ದುಲ್ ಅಝೀಮ್ ಉಪಸ್ಥಿತರಿದ್ದರು