ಆಸ್ಟ್ರೇಲಿಯನ್ ಓಪನ್: ಮುಗುರುಝ ಸವಾಲು ಅಂತ್ಯ

Update: 2018-01-18 05:30 GMT

ಮೆಲ್ಬೋರ್ನ್, ಜ.18: ವಿಂಬಲ್ಡನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.

ಇಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಮುಗುರುಝ ತೈವಾನ್‌ನ ಸಿಯಾ ಸು-ವೀ ವಿರುದ್ಧ 7-6(7/1), 6-4 ಸೆಟ್‌ಗಳಿಂದ ಸೋತಿದ್ದಾರೆ.

ಎರಡು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಮುಗುರುಝ ಒಂದು ಗಂಟೆ, 59 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ತನ್ನ ವೇಗವನ್ನು ಕಾಯ್ದುಕೊಳ್ಳಲು ಪರದಾಡಿದರು. 32ರ ಹರೆಯದ ಮುಗುರುಝ 2012ರಲ್ಲಿ ಗ್ವಾಂಗ್‌ಝೌನಲ್ಲಿ ಕೊನೆಯ ಬಾರಿ ಡಬ್ಲುಟಿಎ ಟೂರ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News