ಈ ಬಾರಿಯ ‘ಐಸಿಸಿ ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಗೆದ್ದ ಭಾರತೀಯ ಯಾರು ಗೊತ್ತಾ?

Update: 2018-01-18 07:02 GMT

ಹೊಸದಿಲ್ಲಿ, ಜ.18: ದಕ್ಷಿಣ ಆಫ್ರಿಕ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಸೋತ ನಿರಾಸೆಯಲ್ಲಿದ್ದ ಭಾರತ ನಾಯಕ ವಿರಾಟ್ ಕೊಹ್ಲಿಗೆ ಸಿಹಿ ಸುದ್ದಿಯೊಂದು ಬಂದಿದೆ. ಗುರುವಾರ ನಡೆದ ಐಸಿಸಿ ಅವಾರ್ಡ್ಸ್‌ನಲ್ಲಿ ಕೊಹ್ಲಿ ‘ಐಸಿಸಿ ವರ್ಷದ ಕ್ರಿಕೆಟಿಗ’,‘ವರ್ಷದ ಏಕದಿನ ಕ್ರಿಕೆಟಿಗ’ ಹಾಗೂ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ನೀಡಿರುವ ಅಮೋಘ ಪ್ರದರ್ಶನಕ್ಕೆ ‘ಸರ್ ಗ್ಯಾರಿಫೀಲ್ಡ್ ಸೋಬರ್ಸ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಐಸಿಸಿ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕನಾಗಿಯೂ ಆಯ್ಕೆಯಾಗಿದ್ದಾರೆ.

 ಯಜುವೇಂದ್ರ ಚಹಾಲ್ ಐಸಿಸಿ ವರ್ಷದ ಶ್ರೇಷ್ಠ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿ ಪಡೆದರು. ಕೊಹ್ಲಿ 2ನೇ ಬಾರಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಪಡೆದರು. ಐದು ವರ್ಷಗಳ ಹಿಂದೆ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದರು.

ಭಾರತದ ಬ್ಯಾಟಿಂಗ್ ಮಾಂತ್ರಿಕ ಕೊಹ್ಲಿ 2017ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 7 ಶತಕಗಳ ಸಹಿತ 1,818 ರನ್ ಗಳಿಸಿದ್ದರು. ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಟೆಸ್ಟ್‌ನಲ್ಲಿ 8 ಶತಕ ಸಹಿತ 2,203 ರನ್ ಹಾಗೂ ಟ್ವೆಂಟಿ-20ಯಲ್ಲಿ 299 ರನ್ ಗಳಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಫೈನಲ್‌ಗೆ ತಲುಪಲು ಮಾರ್ಗದರ್ಶನ ನೀಡಿದ್ದ ಕೊಹ್ಲಿ ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯ, ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ ಜಯಿಸಲು ಕಾರಣರಾಗಿದ್ದಾರೆ. ಬಾಂಗ್ಲಾದೇಶ, ಆಸ್ಟ್ರೇಲಿಯ ಹಾಗೂ ಶ್ರೀಲಂಕಾ(ಎರಡು ಬಾರಿ) ವಿರುದ್ಧ ಟೆಸ್ಟ್ ಸರಣಿಯನ್ನು ಜಯಿಸಿದ್ದರು.

 ಕಾನ್ಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ 32ನೇ ಶತಕ ದಾಖಲಿಸಿದ್ದ ಕೊಹ್ಲಿ ಅತ್ಯಂತ ವೇಗವಾಗಿ 9,000 ರನ್ ಪೂರೈಸಿದ ಸಾಧನೆ ಮಾಡಿದ್ದರು.

ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ 889 ರೇಟಿಂಗ್ ಪಾಯಿಂಟ್ ಪಡೆದಿದ್ದ ಕೊಹ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News