ಮೆಹ್ರೀನ್ ಅಹ್ಮದ್

Update: 2018-01-18 15:54 GMT

ಮಂಗಳೂರು, ಜ. 18: ಮೂಲತಃ ಸುರತ್ಕಲ್ ಸಮೀಪದ ಕುಳಾಯಿಯ ಪ್ರಸ್ತುತ ಸೌದಿಯಲ್ಲಿ ವಾಸವಾಗಿರುವ ಅಹ್ಮದ್ ಕುಳಾಯಿ ಅವರ ಪುತ್ರಿ ಮೆಹ್ರೀನ್ ಅಹ್ಮದ್ (15) ಬುಧವಾರ ಮಧ್ಯಾಹ್ನ ನಿಧನರಾದರು.

ಅಹ್ಮದ್ ಅವರು ಸುಮಾರು 25 ವರ್ಷಗಳಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಕುಟುಂಬ ಸಮೇತ ಸೌದಿಯ ಜಿದ್ದಾದಲ್ಲಿ ವಾಸವಾಗಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೆಹ್ರೀನ್ ಅವರು ಕಳೆದ ಕೆಲವು ಸಮಯದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಯ ಹೊತ್ತಿದೆ ಜಿದ್ದಾದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಮೆಹ್ರೀನ್ ಕೆಲವು ಸಮಯದಿಂದ ಕಾಡುತ್ತಿದ್ದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಕಳೆದ ವರ್ಷ ಶಿಕ್ಷಣವನ್ನು ಮೊಟಕುಗೊಳಿಸಿದ್ದರು.

ಮೃತರು ತಂದೆ, ತಾಯಿ, ಸಹೋದರ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನೂರ್ ಜಹಾನ್
ಸಿ.ಸುಂದರ್