ಇವರೆಷ್ಟು ಕೃತಜ್ಞರಾಗಿದ್ದಾರೆ ?

Update: 2018-01-18 18:44 GMT

ಮಾನ್ಯರೇ,

ಬಾಬಾ ಸಾಹೇಬರ ಸಂವಿಧಾನದ ಆಶಯದಂತೆ ಸಮಗ್ರವಾಗಿ ಭೂಸುಧಾರಣೆಯಾಗಬೇಕು , ಗೇಣಿದಾರರಿಗೆ ಭೂಮಿ ಕೊಡಬೇಕು ಆ ಮೂಲಕ ಉಳುವವನೇ ಹೊಲದೊಡೆಯ ಆಗಬೇಕೆಂದು, ಭೂ ರಹಿತ ತಳಸಮುದಾಯದ ಶೂದ್ರ, ದಲಿತರಿಗೆ ಸರಕಾರಿ ಭೂಮಿಯನ್ನು ಕೊಡಬೇಕೆಂದು ಹಾಗೂ ಅವರಿಗೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ, ಸೌಲಭ್ಯ, ಸವಲತ್ತುಗಳು ಸೇರಿದಂತೆ ಎಲ್ಲಾ ಸಂವಿಧಾನದ ಆಶಯಗಳನ್ನು ನೆರವೇರಿಸಬೇಕೆಂದು ಧರ್ಮದ ಬಗ್ಗೆ ಮಾತನಾಡುವ ಯಾವ ಮುಖಂಡರೂ ಹೋರಾಟ ಮಾಡಿಲ್ಲ. (ಈಗಲೂ ಈ ಸಮುದಾಯದ ಜನರ ಪರ ಅವರ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿಲ್ಲ.) ಆಗ ಈ ಸಂವಿಧಾನದ ಆಶಯಗಳ ಬಗ್ಗೆ ಧ್ವನಿ ಎತ್ತಿದ್ದು ಮತ್ತು ಹೋರಾಟ ಮಾಡಿದ್ದು ದಲಿತಪರ ಸಂಘಟನೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದ ಸಂಘಟನೆಗಳು. ಆದರೆ ಈಗ ಅವೆಲ್ಲದರ ಫಲಾನುಭವಿಗಳು ತಮ್ಮ ಬದುಕಿಗೆ ಬೆಳಕಾದವರನ್ನೇ ಹಿಂದೆ ತಮ್ಮ ಪೂರ್ವಜರನ್ನು ಸಾವಿರಾರು ವರ್ಷಗಳ ಕಾಲ ತುಳಿದು ನಾಶಮಾಡಿದ ಮನುವಾದಿಗಳೊಂದಿಗೆ ಸೇರಿಕೊಂಡು ಮುಗಿಸಲು ಹೊರಟಿದ್ದಾರೆ.

ತಳಸಮುದಾಯದ ಜನರ ಸ್ವಾಭಿಮಾನದ ಬದುಕಿಗಾಗಿ ಪ್ರಾಣತೆತ್ತವರು ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ... ಭೂ ಹೋರಾಟಗಾರರ ಪ್ರಾಣವನ್ನು ತೆಗೆದ ಮನುವಾದಿ ಭೂಮಾಲಕರು ಹಾಗೂ ಕಾರ್ಮಿಕ ವಿರೋಧಿ ಬಂಡವಾಳಶಾಹಿ ಉದ್ಯಮಿಗಳು ಕಟ್ಚಿಕೊಂಡ ಧಾರ್ಮಿಕ ಸಂಘಟನೆಗಳ ಜೊತೆ ಧರ್ಮದ ಅಮಲೇರಿಸಿಕೊಂಡ ತಳಸಮುದಾಯದ ಇಂದಿನ ಪೀಳಿಗೆಯ ಯುವಜನತೆ ಹೋಗುತ್ತಿರುವುದನ್ನು ನೋಡಿದರೆ ಇವರೆಷ್ಟು ಕೃತಜ್ಞರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ... ಕೃತಜ್ಞರು ಇತಿಹಾಸದಲ್ಲಿ ಪ್ರತಿಬಾರಿಯೂ ಸೋತಿದ್ದಾರೆ.

Writer - ಸುಹಾಸ್ ಎ.ಎಸ್. ಮೈಸೂರು

contributor

Editor - ಸುಹಾಸ್ ಎ.ಎಸ್. ಮೈಸೂರು

contributor

Similar News