ಜನವರಿ ತಿಂಗಳಲ್ಲಿ ಕೇರಳಕ್ಕೆ ಹೋಗುವವರಿದ್ದರೆ ಈ ಸುದ್ದಿ ಓದಿ

Update: 2018-01-19 10:29 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ,ಜ. 19: ತೈಲ ಬೆಲೆಯೇರಿಕೆಯನ್ನು ವಿರೋಧಿಸಿ ಕೇರಳದಲ್ಲಿ ಜನವರಿ 24ಕ್ಕೆ ವಾಹನ ಮುಷ್ಕರ ನಡೆಸಲು   ತೀರ್ಮಾನಿಸಲಾಗಿದ್ದು, ಅಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರುಗಂಟೆವರೆಗೆ ಮುಷ್ಕರ ನಡೆಸಲು  ಟ್ರೇಡ್ ಯೂನಿಯನ್‍ಗಳು, ಸಾರಿಗೆಕ್ಷೇತ್ರದ ನೌಕರರನ್ನೊಳಗೊಂಡ ಜಂಟಿ ಹೋರಾಟ ಸಮಿತಿ  ತೀರ್ಮಾನಿಸಿದೆ. ಬಸ್‍ ಟಿಕೆಟ್ ದರ ಹೆಚ್ಚಳಕ್ಕಾಗಿ ಬಸ್ ಮಾಲಕರು ಜನವರಿ 30ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಈಗಾಗಲೇ ಘೋಷಿಸಿದ್ದಾರೆ.

ಬಸ್,ಲಾರಿ, ಆಟೋರಿಕ್ಷಾ, ಟ್ಯಾಕ್ಸಿ , ಟ್ಯಾಂಕರ್ ಸಹಿತ ಎಲ್ಲ ವಾಹನಗಳು ಮುಷ್ಕರದಲ್ಲಿ ಭಾಗವಹಿಸಲಿದೆ ಎಂದು ಜಂಟಿ ಹೋರಾಟ ಸಮಿತಿ ನಾಯಕರು ತಿಳಿಸಿದ್ದಾರೆ. ವರ್ಕ್ ಶಾಪ್‍ಗಳು, ಬಿಡಿ ಭಾಗಗಳ ಅಂಗಡಿಗಳು, ಪಾರ್ಸಲ್ ಸರ್ವಿಸ್ ಮುಷ್ಕರದಲ್ಲಿ ಭಾಗವಹಿಸಲಿದೆ. ಸಿಐಟಿಯು, ಎಐಟಿ ಯುಸಿ, ಐಎನ್‍ಟಿಯುಸಿ,ಯುಟಿಯುಸಿ, ಎಚ್‍ಎಂಎಸ್,ಎಸ್‍ಟಿಯು, ಜನತಾ ಟ್ರೇಡ್ ಯೂನಿಯನ್, ಟಿಯುಸಿಐ ಟ್ರೇಡ್ ಯೂನಿಕಗಳು ಜಂಟಿ ಹೋರಾಟ ಸಮಿತಿಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News