ಬಿಡುಗಡೆಯಾಗಿದೆ ‘ವಾಟ್ಸ್ ಆ್ಯಪ್ ಬ್ಯುಸಿನೆಸ್ ಆ್ಯಪ್’

Update: 2018-01-19 10:37 GMT

ಹೊಸದಿಲ್ಲಿ, ಜ.19: ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ತನ್ನ ನೂತನ ‘ವಾಟ್ಸ್ ಆ್ಯಪ್ ಬ್ಯುಸಿನೆಸ್ ಆ್ಯಪ್’ ಬಿಡುಗಡೆಗೊಳಿಸಿದ್ದು, ಮುಂದಿನ ಕೆಲದಿನಗಳಲ್ಲಿ ಭಾರತದಲ್ಲೂ ಈ ಆ್ಯಪ್ ಲಭ್ಯವಾಗಲಿದೆ.

ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ನೂತನ ಆ್ಯಪ್ ಒಂದನ್ನು ಬಿಡುಗಡೆಗೊಳಿಸಲಾಗುವುದು ಎಂದು ವಾಟ್ಸ್ ಆ್ಯಪ್ ಕಳೆದ ವರ್ಷ ಘೋಷಿಸಿತ್ತು. ಈ ನಿಟ್ಟಿನಲ್ಲಿ ಕೆಲ ದಿನಗಳ ಹಿಂದೆ ಬ್ಯುಸಿನೆಸ್ ಖಾತೆಗಳನ್ನು ವೆರಿಫೈ ಕೂಡ ಮಾಡಿತ್ತು. ಇಂಡೋನೇಷಿಯಾ, ಇಟಲಿ, ಮೆಕ್ಸಿಕೋ, ಬ್ರಿಟನ್ ಹಾಗು ಅಮೆರಿಕದಲ್ಲಿ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

ಮುಂದಿನ ಕೆಲ ದಿನಗಳಲ್ಲಿ ಭಾರತದಲ್ಲೂ ಈ ಆ್ಯಪ್ ಲಭ್ಯವಾಗಲಿದೆ. ಗ್ರಾಹಕರನ್ನು ಸುಲಭವಾಗಿ ತಲುಪುವುದು ಈ ಆ್ಯಪ್ ನ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ವಾಟ್ಸ್ಯಾಪ್ ಬ್ಯುಸಿನೆಸ್ ಆ್ಯಪ್ ನ ಈ ಫೀಚರ್ ಗಳು ನೆರವಾಗಲಿದೆ.

ಬ್ಯುಸಿನೆಸ್ ಪ್ರೊಫೈಲ್: ಉದ್ಯಮದ ವಿವರ, ಇಮೇಲ್, ಕಚೇರಿ ವಿಳಾಸ ಹಾಗು ವೆಬ್ ಸೈಟ್ ಗಳಂತಹ ಮಾಹಿತಿಯನ್ನು ಪಡೆಯಲು ಬ್ಯುಸಿನೆಸ್ ಪ್ರೊಫೈಲ್ ಸಹಾಯ ಮಾಡುತ್ತದೆ.

ಮೆಸೇಜಿಂಗ್ ಟೂಲ್: ಇದು ಸ್ಮಾರ್ಟ್ ಮೆಸೇಜಿಂಗ್ ಟೂಲ್ ಆಗಿದೆ. ಅಂದರೆ ಗ್ರಾಹಕರ ಪ್ರಶ್ನೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುತ್ತದೆ.

ಅಕೌಂಟ್ ಟೈಪ್: ಬ್ಯುಸಿನೆಸ್ ಅಕೌಂಟ್ (ವ್ಯವಹಾರ ಖಾತೆ) ನ ಪಟ್ಟಿಯಲ್ಲಿರುವ ಉದ್ಯಮದೊಂದಿಗೆ ವ್ಯವಹರಿಸುತ್ತಿರುವುದನ್ನು ಗ್ರಾಹಕರಿಗೆ ಈ ಫೀಚರ್ ಸ್ಪಷ್ಟಪಡಿಸುತ್ತದೆ. ವಾಟ್ಸ್ ಆ್ಯಪ್ ಮೆಸೆಂಜರ್ ನಂತೆ ವಾಟ್ಸ್ ಆ್ಯಪ್ ವೆಬ್ ನಲ್ಲೂ ಕೆಲ ಆಯ್ಕೆಗಳಿವೆ. ಡೆಸ್ಕ್ ಟಾಪ್ ನಲ್ಲಿ ವಾಟ್ಸ್ ಆ್ಯಪ್ ಬ್ಯುಸಿನೆಸ್ ಮೂಲಕ ಗ್ರಾಹಕರು ಸಂದೇಶಗಳನ್ನು ಕಳುಹಿಸಲು ಹಾಗು ಸ್ವೀಕರಿಸಲು ಸಾಧ್ಯವಾಗಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News