ಸರಕಾರದ ಯೋಜನೆಗಳು ಇವರಿಗೆ ತಲುಪಲಿ

Update: 2018-01-19 18:37 GMT

ಮಾನ್ಯರೇ,

  ನಮ್ಮ ಸಮಾಜದಲ್ಲಿರುವ ದಕ್ಕಲಿಗ ಸಮುದಾಯದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇವರು ಭಿಕ್ಷೆ ಬೇಡಿ ಅಥವಾ ಸಣ್ಣ ಪುಟ್ಟ ವ್ಯಾಪಾರ, ಕೂಲಿ ಮಾಡಿ ಬದುಕುವವರು. ಮಹಿಳೆಯರು ಬಾಚಣಿಗೆ, ಬಟ್ಟೆ ಪಿನ್ನು, ಬಳೆ ಮಾರಿಕೊಂಡು ಜೀವನ ಸಾಗಿಸುತ್ತಾರೆ. ಇವರು ರಸ್ತೆ ಪಕ್ಕದಲ್ಲಿ, ಖಾಲಿ ಜಾಗದಲ್ಲೋ ಜೋಪಡಿ ಹಾಕಿ ಬದುಕುತ್ತಾರೆ. ಇವರ ಬದುಕಿನಲ್ಲಿ ಇನ್ನು ‘ಅಭಿವೃದಿ’್ಧಯ ಬೆಳಕು ಕಂಡಿಲ್ಲ. ಈ ಸಮುದಾಯವರಿಗಾಗಿ ಸರಕಾರದಲ್ಲಿ ಸಾಕಷ್ಟು ಯೋಜನೆಗಳಿವೆ. ಆದರೆ ಈ ಸಮುದಾಯಕ್ಕೆ ಇನ್ನೂ ಸರಕಾರದ ಸೌಲಭ್ಯಗಳು ತಲುಪಿಲ್ಲ. ಈ ಕುರಿತು ಇವರಿಗೆ ಅರಿವು ಮೂಡಿಸುವ ಪ್ರಯತ್ನ ಸಹ ಚುರುಕಾಗಿಲ್ಲ. ಹೀಗಾಗಿ ಈ ಯುಗದಲ್ಲೂ ಇವರು ತೀರಾ ತಳಮಟ್ಟದಲ್ಲಿ ಬದುಕುತ್ತಿದ್ದಾರೆ. ಅಲೆದಾಟದಲ್ಲೇ ಇವರ ಬದುಕು ಸಾಗುತ್ತಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಈ ಸಮುದಾಯದ ಜನರು ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ದೊಡ್ಡವರು, ಮಕ್ಕಳು ಅನಿವಾರ್ಯವಾಗಿ ಭಿಕ್ಷೆ ಬೇಡಿ ಬದುಕಬೇಕಾದ ಪರಿಸ್ಥಿತಿ ಇದೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲು ಕಷ್ಟ ಆಗುತ್ತಿದೆ. ಇನ್ನಾದರೂ ಸರಕಾರ ತನ್ನ ಯೋಜನೆಗಳನ್ನು ಈ ಸಮುದಾಯದ ಜನರಿಗೆ ತಲುಪಿಸಿ ಅವರ ಅಭಿವೃದ್ಧಿಗೆ ಮುಂದಡಿ ಇಡಬೇಕಾಗಿದೆ.

Writer - - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News