ಭಾರತದ ಅತ್ಯುನ್ನತ ನ್ಯಾಯಾಲಯದಲ್ಲಿ ಒಂದು ಗೌರವಾನ್ವಿತ ಭಿನ್ನಾಭಿಪ್ರಾಯ

Update: 2018-01-21 08:24 GMT

ಒಂದು ಬಲಿಷ್ಠವಾದ ರಾಜಕೀಯ ವ್ಯಕ್ತಿತ್ವವು ನ್ಯಾಯಾಧೀಶರೊಬ್ಬರನ್ನು ಹೆದರಿಸಬಹುದು, ಬೆದರಿಸಬಹುದು ಎಂಬ ಭಾವನೆ ಮೂಡಿದಾಗ ಅಥವಾ ತಮ್ಮ ದೈಹಿಕ ಸುರಕ್ಷತೆಯ ಕಾರಣಕ್ಕಾಗಿ ನ್ಯಾಯಾಧೀಶರುಗಳಿಗೆ ಅಭದ್ರತೆಯ ಭಾವನೆಗಳು ಬಂದಾಗ ಇಡೀ ನ್ಯಾಯಾಂಗ ವ್ಯವಸ್ಥೆಯೇ ಕುಸಿಯುತ್ತದೆ.

ಆ ಎಲ್ಲ ನಾಲ್ಕು ಮಂದಿ ತುಂಬಾ ಕಾಳಜಿಉಳ್ಳವರಾಗಿ ಮತ್ತು ತುಂಬಾ ಪ್ರಾಮಾಣಿಕವಾಗಿ, ತುಂಬಾ ಮಾನವೀಯವಾಗಿ ಹಾಗೂ ದುರ್ಬಲರಾಗಿ ಕಂಡರು. ಪತ್ರಿಕಾ ಗೋಷ್ಠಿಯೊಂದರ ಗೊಂದಲಪೂರಿತ ರೀತಿ ರಿವಾಜುಗಳು ಹಾಗೂ ಪ್ರಕ್ರಿಯೆಗಳ ಬಗ್ಗೆ ಅವರು ಅಷ್ಟೇ ಅಪರಿಚಿತರಾಗಿ ಕಂಡರು. ಆದರೂ ಆ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು. ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಅಭೂತಪೂರ್ವವಾದ ಬೆಳಕಿನ ಸೆಲೆಯ ಒಂದು ಕ್ಷಣವನ್ನು ನಿರ್ಮಿಸುವುದರಲ್ಲಿ ಯಶಸ್ವಿಯಾದರು. ಭಾರತದ ರಾಜಕಾರಣ ಆ ಮಧ್ಯಾಹ್ನ ಬದಲಾಗಿಹೋಯಿತು. 12ನೇ ತಾರೀಕಿನ ಆ ಶುಕ್ರವಾರದ ಬಳಿಕ ಉನ್ನತಮಟ್ಟದ ನ್ಯಾಯಾಂಗ ಹಿಂದಿನ ಹಾಗೆಯೇ, ಬದಲಾಗದೆ ಉಳಿಯುವುದಿಲ್ಲ.

ಸಂಪ್ರದಾಯಗಳು, ಕನ್ವೆನ್ಶನ್‌ಗಳು, ವಿಧಿವಿಧಾನಗಳು ಮತ್ತು ಪ್ರೊಟೊಕಾಲ್‌ಗಳನ್ನಾಧರಿಸಿಯೇ ಸುಪ್ರೀಂ ಕೋರ್ಟ್‌ಕಾರ್ಯಾಚರಿಸುವುದು. ಅದರ ಕಾರ್ಯ ವಿಧಾನಗಳು, ಸಿದ್ಧಾಂತಗಳು ಮತ್ತು ಕೆಲಸಮಾಡುವ ಹವ್ಯಾಸಗಳು ಅಜ್ಞಾತತೆ, ದೂರ ಮತ್ತು ನಿರ್ಲಿಪ್ತತೆಯಲ್ಲಿ ಬೇರೂರಿವೆ. ಆ ನಾಲ್ವರು ನ್ಯಾಯಮೂರ್ತಿಗಳು - ಜೆ.ಚೆಲಮೇಶ್ವರ್, ರಂಜನ್ ಗೊಗೊಯ್, ಮದನ್ ಬಿ ಲೊಕೂರ್ ಮತ್ತು ಕುರಿಯನ್ ಜೋಸೆಫ್ - ಇಂತಹ ಕಟ್ಟುನಿಟ್ಟಾದ ನ್ಯಾಯಾಂಗ ಪರಂಪರೆಯಿಂದಲೇ ಬಂದವರು. ಆದರೂ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಬಗ್ಗೆ ತಮಗಿರುವ ಅಸಮಾಧಾನವನ್ನು ಅಭೂತಪೂರ್ವವಾಗಿ ಸಾರ್ವಜನಿಕವಾಗಿ ಹೇಳಿಕೊಂಡರು. ಯಾಕೆ? ಯಾಕೆ? ವೌನ ಮತ್ತು ಅಜ್ಞಾತತೆಯ ಸಂಪ್ರದಾಯವನ್ನು ಮುರಿಯಲು ಈ ನಾಲ್ವರು ನ್ಯಾಯಮೂರ್ತಿಗಳಿಗೆ ಖಚಿತವಾಗಿಯೂ ಬಲವಾದ ಕಾರಣಗಳಿದ್ದಿರಬೇಕು. ಅವರು, ಮೊದಲು ಮುಖ್ಯ ನ್ಯಾಯಮೂರ್ತಿಯವರಲ್ಲಿ, ನಿವೇದಿಸಿಕೊಂಡ ಅವರ ಅಳಲಿಗೆ ಸರಿಯಾದ ಪ್ರತಿಕ್ರಿಯೆ ದೊರಕಲಿಲ್ಲ. ಅವರು ಈಗ ಬಹಿರಂಗಗೊಳಿಸಿರುವ ಪತ್ರವು ಓರ್ವ ಹಠಮಾರಿ ಹಾಗೂ ನಾಲ್ವರು ನ್ಯಾಯಮೂರ್ತಿಗಳು ಹೇಳುವುದರ ಬಗ್ಗೆ ಯಾವುದೇ ಕಾಳಜಿ ತೋರದ, ಆಸಕ್ತಿ ತೋರದ ಮುಖ್ಯ ನ್ಯಾಯಮೂರ್ತಿಯ ಚಿತ್ರ ನೀಡುತ್ತದೆ. ಒಟ್ಟಿನಲ್ಲಿ ಒಂದೇ ಸಾಧ್ಯ ಉಪಸಂಹಾರವೆಂದರೆ, ಅತ್ಯುನ್ನತವಾದ ನ್ಯಾಯಾಂಗ ವೇದಿಕೆಯ ಒಳಗಡೆಯೇ ಒಂದು ಆಂತರಿಕ ಪತನ, ಕುಸಿತ ಸಂಭವಿಸಿದೆ.

ನ್ಯಾಯಾಂಗದ ಸತ್ವ ಮತ್ತು ಶಕ್ತಿಯನ್ನು ಉಳಿಸಿಕೊಳ್ಳಬೇಕಾದರೆ ಭಾರತದ ಮುಖ್ಯ ನ್ಯಾಯಾಧೀಶನಾಗಿ ಅಧಿಕಾರ ವಹಿಸಿಕೊಳ್ಳುವ ಯಾವುದೇ ವ್ಯಕ್ತಿ ಬುದ್ಧಿವಂತಿಕೆಯ ನಾಯಕತ್ವ ತೋರಿಸಬೇಕಾಗುತ್ತದೆ. ಆ ಹುದ್ದೆಯಲ್ಲಿ ‘ಸಣ್ಣ-ಮನಸ್ಸು’ನ್ನು ಅವಕಾಶವಿಲ್ಲವೆಂದೇ ಹೇಳ ಬಹುದು. ಭಾರತದ ಮುಖ್ಯ ನ್ಯಾಯಾಧೀಶರಾದವರು ನ್ಯಾಯಾಂಗಸಹೋದರತ್ವದ ಸಂತಸ, ಸಂಭ್ರಮ ಗಳೊಂದಿಗೆ ಇತರ ನ್ಯಾಯ ಮೂರ್ತಿಗಳನ್ನು ಪರಸ್ಪರ ಗೌರವ ಮತ್ತು ಕಾಳಜಿಯೊಂದಿಗೆ ತನ್ನ ಜೊತೆ ಕರೆದೊಯ್ಯಬೇಕು. ಮುಖ್ಯ ನ್ಯಾಯಾಧೀಶರೊಂದಿಗೆ ಸಂಪರ್ಕ ಸೇತುವೆಯನ್ನು ಮುಕ್ತವಾಗಿ ತೆರೆದಿಟ್ಟಿರಲಿಲ್ಲವೆಂದು ನಾವು ನಾಲ್ವರು ನ್ಯಾಯಮೂರ್ತಿಗಳನ್ನು ದೂಷಿಸುವಂತಿಲ್ಲ.

ಆ ನಾಲ್ವರು ನ್ಯಾಯಮೂರ್ತಿಗಳ ಪತ್ರದ ಸಾಲುಗಳ ಮಧ್ಯದಲ್ಲಿರುವ ಅರ್ಥವನ್ನು ಗ್ರಹಿಸಿದರೆ, ‘‘ನ್ಯಾಯಾಂಗ ವ್ಯವಸ್ಥೆಯ ಒಗ್ಗಟ್ಟನ್ನು’’ ಹೇಗೆ ಸಂರಕ್ಷಿಸುವುದು ಎಂಬುದು ಈ ಭಿನ್ನಾಭಿಪ್ರಾಯದ ಮುಖ್ಯ ಬಿಂದು ಅನಿಸುತ್ತದೆ.

1950ರಲ್ಲಿ ಆರಂಭದಿಂದಲೇ ಕಾರ್ಯಾಂಗ - ನ್ಯಾಯಾಂಗದ ಸಮತೋಲನವು, ಬಹಳಷ್ಟು ಮೆಟ್ಟಿಗೆ, ಅಂದಂದಿನ ರಾಜಕೀಯ ಪಕ್ಷದ ಪ್ರಾಬಲ್ಯದಿಂದಲೇ ನಿರ್ಧರಿಸಲ್ಪಟ್ಟಿರುವುದು ಕಂಡು ಬರುತ್ತದೆ. 1990ರ ದಶಕದ ಮಧ್ಯಭಾಗದಲ್ಲಷ್ಟೆ ನ್ಯಾಯಾಂಗವು ರಾಜಕಾರಣಿಗಳ ಜಗತ್ತಿನ ಮರ್ಜಿಯ ವಿರುದ್ಧ ಸಾಕಷ್ಟು ದೃಢವಾಗಿ ಸೆಟೆದು ನಿಂತಿತು.

ಆದರೆ ಇತರ ಎಲ್ಲ ಸಂಸ್ಥೆಗಳ ಹಾಗೆ, ನ್ಯಾಯಾಂಗ ಕೂಡ ವ್ಯಕ್ತಿಗಳೇ ನಿರ್ವಹಿಸುವ ಒಂದು ಸಂಸ್ಥೆ. ಆದ್ದರಿಂದ ನ್ಯಾಯಾಧೀಶರು ಸಂತರು ಅಥವಾ ಸಾಧುಗಳು ಎಂದು ಭ್ರಮಿಸುವುದು ಸರಿಯಲ್ಲ. ಸಮಕಾಲೀನ ಸಮಾಜದ ಭಾವೋದ್ರೇಕಗಳು, ಕ್ರೋಧ ಮತ್ತು ದೈನಂದಿನ ಆಗುಹೋಗುಗಳಿಂದ ಅವರು ಕೂಡಾ ಪ್ರಭಾವಿತರಾಗುತ್ತಾರೆ. ಅಷ್ಟೇ ಅಲ್ಲ ನಮ್ಮದು ‘ರಾಜಕೀಯವಾಗಿ ನೇಮಕಗೊಂಡ’ ನ್ಯಾಯಮೂರ್ತಿಗಳ ಒಂದು ವ್ಯವಸ್ಥೆ ಅಲ್ಲ ಎಂದು ನಾವು ಎಷ್ಟೇ ನಟಿಸಿದರೂ ಕೆಲವು ನ್ಯಾಯಾಧೀಶರಿಗೆ ರಾಜಕೀಯ ಒಲವುಗಳಿವೆ ಹಾಗೂ ಆಶ್ರಯದಾತರಿದ್ದಾರೆ. ಆದರೂ ನ್ಯಾಯಾಂಗದ ಅತ್ಯುನ್ನತ ಮಟ್ಟದಲ್ಲಿ ಅದು ಗೆದ್ದೇ ಗೆಲ್ಲುತ್ತದೆ. ಹೀಗೆಂದು ತಿಳಿದುಕೊಳ್ಳಲು ನಾವು ಇಷ್ಟಪಡುತ್ತೇವೆ. ಆದರೆ ನಾವು ಹೀಗೆ ತಪ್ಪಾಗಿ ಅಂದುಕೊಳ್ಳುತ್ತೇವೆ ‘ತಮ್ಮ ಆಧ್ಯತೆಗನುಗುಣವಾಗಿ’ ನ್ಯಾಯಪೀಠಗಳನ್ನು ರಚಿಸಲಾಗುತ್ತದೆಂಬ ಬಗ್ಗೆ ನಾಲ್ವರು ನ್ಯಾಯಮೂರ್ತಿಗಳು ಮಾಡುವ ಉಲ್ಲೇಖವೇ ಅಂತಹ ರಚನೆಯ ಹಿಂದಿರುವ ಉದ್ದೇಶ ಘನವಾದುದಲ್ಲ ಎಂಬ ಸೂಚನೆಯನ್ನೊಳಗೊಂಡಿದೆ.

ಕೋಣೆಯಲ್ಲಿರುವ ಆನೆಯನ್ನು-ನ್ಯಾಯಮೂರ್ತಿ ಬಿ.ಎಚ್. ಲೋಯಾ ಪ್ರಕರಣವನ್ನು-ಗಮನಿಸದೆ ಇರುವುದು ಅಸಾಧ್ಯ. ಲೋಯಾರವರ ಸಾವಿನ ಪ್ರಕರಣವು ನಾವು ಕಾನೂನಿ ನಿಂದ ರೂಲ್ ಆಫ್ ಲಾದಿಂದ ಆಳಲ್ಪಡುವ ಒಂದು ದೇಶವೆಂಬುದನ್ನು ಖಚಿತಪಡಿಸುವುದರಲ್ಲಿ ನ್ಯಾಯಾಂಗದ ಪಾತ್ರ ಅತಿಮುಖ್ಯವೆಂಬುದನ್ನು ಹೇಳುತ್ತದೆ. ಒಂದು ಅತ್ಯಂತ ಸೂಕ್ಷ್ಮವಾದ ಪ್ರಕರಣದ, ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರೊಬ್ಬರು ರಹಸ್ಯಾತ್ಮಕವಾದ ಸನ್ನಿವೇಶಗಳಲ್ಲಿ ಮೃತಪಟ್ಟಾಗ ಪ್ರತಿಯೊಬ್ಬ ನ್ಯಾಯಾಂಗ ಸಂಬಂಧಿ ವ್ಯಕ್ತಿಯು ಆತನ / ಆಕೆಯ ಭಯ ತುಂಬಿದ ತೀರ್ಮಾನಗಳಿಗೆ ಬರಲೇಬೇಕಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯೇ ಕುಸಿಯುತ್ತದೆ. ತನ್ನ ಕಣ್ಗಾವಲಿನಲ್ಲಿರುವ ದೇಶದ ಯಾವ ನ್ಯಾಯಾಧೀಶರೂ ತಾವು ಸುರಕ್ಷಿತರಲ್ಲ ಎಂಬ ಭಾವನೆ ಹೊಂದಿರಬೇಕಾಗಿಲ್ಲ ಎಂಬ ವಿಶ್ವಾಸ ದೇಶದ ಸಮಗ್ರ ನ್ಯಾಯಾಂಗದ ಸಹೋದರ/ಸಹೋದರಿಯರಿಗೆ, ನ್ಯಾಯಾಂಗ ಭ್ರಾತೃತ್ವಕ್ಕೆ ಮೂಡುವಂತೆ ಮಾಡಬೇಕಾದದ್ದು ಭಾರತದ ಮುಖ್ಯ ನ್ಯಾಯಾಧೀಶರ ಕರ್ತವ್ಯವಾಗಿತ್ತು ಮತ್ತು ಈಗಲೂ ಆಗಿದೆ. ಒಂದು ಹೊಸ ಭಾರತ ಬಂದಿರಬಹುದು; ಆದರೆ ಭಾರತಕ್ಕೆ ಹೊಸ ಸಂವಿಧಾನವಿಲ್ಲ. ತಮಗೆ ಇನ್ನು ಕೂಡ ನ್ಯಾಯಾಂಗದ ರಕ್ಷಣೆ ಇದೆ ಎಂದು ದೇಶದ ನಾಗರಿಕರಿಗೆ ಆಶ್ವಾಸನೆ ನೀಡುವ, ಭರವಸೆ ನೀಡುವ ಆವಶ್ಯಕತೆ ದೆ. ಇಂತಹ ಆಶ್ವಾಸನೆ, ವಾಗ್ದಾನ ಓರ್ವ ಬಣವಾದಿ (ಫ್ಯಾಕ್ಷನಲಿಸ್ಟ್) ಮುಖ್ಯ ನ್ಯಾಯಾಧೀಶರಿಂದ ಬರಲು ಸಾಧ್ಯವಿಲ್ಲ.

Writer - ಹರೀಶ್ ಬೇರ್

contributor

Editor - ಹರೀಶ್ ಬೇರ್

contributor

Similar News