×
Ad

ಬೆಂಗಳೂರು: ನಾಲ್ಕನೆ ಮಹಡಿಯಿಂದ ಬಿದ್ದು ಮೃತಪಟ್ಟ ಪೈಂಟರ್

Update: 2018-01-22 23:41 IST

ಬೆಂಗಳೂರು,ಜ.22: ಕಟ್ಟಡದ ನಾಲ್ಕನೆ ಮಹಡಿಯಿಂದ ಕೆಳಗೆ ಬಿದ್ದು ಪೈಂಟರ್ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ರವಿವಾರ ತಡರಾತ್ರಿ ಕಾಡುಗೋಡಿಯ ಸಾದರಮಂಗಲ ಸ್ಲಂ ಬೋರ್ಡ್‌ನಲ್ಲಿ ನಡೆದಿದೆ.

ಸಾದರಮಂಗಲದ ರಾಜಶೇಖರ್(22) ಮೃತಪಟ್ಟವರು, ಪೇಂಟಿಂಗ್ ಕೆಲಸ ಮಾಡುತ್ತಿದ್ದ ರಾಜಶೇಖರ್ ರಾತ್ರಿ ಕಟ್ಟಡದ 4ನೆ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆಬಿದ್ದು ಮೃತಪಟ್ಟಿದ್ದಾರೆ.

ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕಾಡುಗೋಡಿ ಪೊಲೀಸರು, ಸ್ಲಂ ಬೋರ್ಡ್‌ನ ಕೊನೆಯ ಮಹಡಿಯ ಮೇಲೆ ಪರಿಶೀಲಿಸಲಾಗಿ, ಮೃತನ ಚಪ್ಪಲಿಗಳು ಸಿಕ್ಕಿದ್ದು ಅವನು ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುತ್ತಾನೆಂದು ಪ್ರಾಥಮಿಕ ತನಿಖೆ ಮತ್ತು ಗಾಯಗಳ ಸ್ವರೂಪಗಳಿಂದ ತಿಳಿದು ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವೈದ್ಯಕೀಯ ಪರೀಕ್ಷಾ ವರದಿ ಹಾಗೂ ಸಾಕ್ಷಿದಾರರ ವಿಚಾರಣೆ ಸಾವಿನ ಕಾರಣ ಪತ್ತೆಹಚ್ಚಲಾಗುವುದು ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News