×
Ad

ಬೈಸಿಕಲ್ ಶೇರಿಂಗ್ ಸವೀರ್ಸ್‌ಗೆ ಚಾಲನೆ

Update: 2018-01-22 23:45 IST

ಬೆಂಗಳೂರು, ಜ.22: ಝೂಮ್‌ಕಾರ್ ಬೈಸಿಕಲ್ ಶೇರಿಂಗ್ ಸರ್ವೀಸ್‌ಗೆ ನಗರದ ಐಐಎಸ್ಸಿಯಲ್ಲಿ ಅದ್ದೂರಿ ಚಾಲನೆ ದೊರೆಯಿತು.

ದೇಶದ ಮೊದಲ ತಂತ್ರಜ್ಞಾನ ಆಧಾರಿತ ಸೈಕಲ್ ಶೇರಿಂಗ್ ಸೇವೆ ಪೆಡ್ಲ್ ವ್ಯಕ್ತಿಗಳಿಗೆ ಅನುಕೂಲಕರವಾದ ಹಾಗೂ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸೇವೆಯನ್ನು ನಗರದಾದ್ಯಂತ ಕಿರು ಪ್ರಯಾಣಗಳಿಗೆ ಇದು ಒದಗಿಸುತ್ತದೆ.

ಐಐಎಸ್ಸಿ ಕ್ಯಾಂಪಸ್‌ನಲ್ಲಿ 100ಕ್ಕೂ ಹೆಚ್ಚು ಸೈಕಲ್‌ಗಳನ್ನು ಪ್ರದರ್ಶನಕ್ಕಿಟ್ಟಿದ್ದು, ವಿದ್ಯಾರ್ಥಿಗಳು, ಅಧ್ಯಾಪಕರು ಕ್ಯಾಂಪಸ್‌ನಲ್ಲಿ ಅಲ್ಪ ದೂರದ ಸಂಚಾರಕ್ಕೆ ಬಳಸಬಹುದು. ಕ್ಯಾಂಪಸ್‌ನಲ್ಲಿ 24 ಸ್ಥಳಗಳಲ್ಲಿ ಈ ಸೇವೆಯಿದ್ದು, ಎಚ್‌ಎಸ್‌ಆರ್ ಬಡಾವಣೆ, ಕೋರಮಂಗಲದಲ್ಲಿದ್ದು ಈ ಸಂಸ್ಥೆಯ ಸೈಕಲ್ ಸಂಚರಿಸುತ್ತಿವೆ.

ಮುಂದಿನ ದಿನಗಳಲ್ಲಿ ನಗರದ ಇತರೆ ವಿವಿಗಳಿಗೆ ನೆರೆಹೊರೆಯಲ್ಲಿಯೂ ಲಭ್ಯವಾಗಲಿದ್ದು 10 ಸಾವಿರಕ್ಕೂ ಅಧಿಕ ಸೈಕಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಸೈಕಲ್‌ಗಳನ್ನು ಬಳಸಲು ಪ್ರತಿ 30 ನಿಮಿಷಕ್ಕೆ 1 ರೂ. ಶುಲ್ಕ ವಿಧಿಸಲಾಗುತ್ತಿದೆ. ಪೆಡ್ಲ್ ಬಳಸುವ ಪ್ರಕ್ರಿಯೆ ಬಹಳ ಸುಲಭವಾಗಿದ್ದು ಪೆಡ್ಲ್ ತಾಣಕ್ಕೆ ಹೋಗಿ ಕ್ಯೂಆರ್ ಕೋಡ್ ಬಳಸಿ ಸ್ಕಾನ್ ಮಾಡಿ ಅನ್‌ಲಾಕ್ ಮಾಡಿ ಪೇಟಿಎಂ ಮೂಲಕ ಪಾವತಿಸಿ ಮತ್ತು ಕೆಲಸ ಪೂರ್ಣಗೊಂಡಾಗ ಪೆಡ್ಲ್ ತಾಣಗಳಲ್ಲಿ ಸೈಕಲ್ ಬಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News