ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲಾವಣೆಗೆ ತಂಡಗಳ ವಿರೋಧ

Update: 2018-01-23 18:52 GMT

 ಜೋಹಾನ್ಸ್‌ಬರ್ಗ್,ಜ.23: ಐಪಿಎಲ್ ಟೂರ್ನಿಯ ನೂತನ ಪ್ರಸಾರ ಸಂಸ್ಥೆ ಸ್ಟಾರ್ ಇಂಡಿಯಾ ಮನವಿಯ ಮೇರೆಗೆ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಯ ಪ್ರತಿ ದಿನ ನಡೆಯುವ ಪಂದ್ಯಗಳ ಸಮಯ ಬದಲಾವಣೆಗೆ ನಿರ್ಧರಿಸಿರುವ ಬಗ್ಗೆ ಐಪಿಎಲ್ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿವೆ.

ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಸಂಜೆ 4 ಗಂಟೆಗೆ ನಡೆಯುವ ಪಂದ್ಯವನ್ನು 5:30ಕ್ಕೆ ಹಾಗೂ ರಾತ್ರಿ 8 ಗಂಟೆಗೆ ಆರಂಭವಾಗುವ ಪಂದ್ಯವನ್ನು 7 ಗಂಟೆಗೆ ಬದಲಾಯಿಸುವ ಪ್ರಸ್ತಾವಕ್ಕೆ ಸಮ್ಮತಿ ನೀಡಿತ್ತು.

 ಐಪಿಎಲ್ ಪಂದ್ಯಗಳ ಸಮಯ ಬದಲಾವಣೆಯ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದು, ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಬಿಸಿಸಿಐ ತಂಡಗಳನ್ನು ಸಂಪರ್ಕಿಸಬೇಕಾಗಿತ್ತು ಎಂದು ಫ್ರಾಂಚೈಸಿಗಳು ತಿಳಿಸಿವೆ.

‘‘ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಸಂಜೆ 7 ಗಂಟೆಗೆ ಪಂದ್ಯ ನಡೆಸುವ ಬಗ್ಗೆ ಲೀಗ್‌ನ ಪ್ರಸಾರ ಸಂಸ್ಥೆಯ ಪ್ರಸ್ತಾವನೆ ಸಲ್ಲಿಸಿತ್ತು. ಎಲ್ಲ ಫ್ರಾಂಚೈಸಿಗಳನ್ನು ಸಂಪರ್ಕಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’’ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News