2018ರ ಮಹಿಳಾ ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಆತಿಥ್ಯ

Update: 2018-01-23 18:53 GMT

ದುಬೈ, ಜ.23: 2018ರ ಆವೃತ್ತಿಯ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನ ಆಂಟಿಗುವಾ ಹಾಗೂ ಬಾರ್ಬಡಾಸ್, ಗಯಾನ ಹಾಗೂ ಸೈಂಟ್‌ಲೂಸಿಯಾ ಆತಿಥ್ಯದಲ್ಲಿ ನ.9 ರಿಂದ 24ರ ತನಕ ನಡೆಯಲಿದೆ ಎಂದು ಐಸಿಸಿ ಘೋಷಿಸಿದೆ.

2016ರಲ್ಲಿ ಕೋಲ್ಕತಾದಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ ಜಯ ಸಾಧಿಸಿ ಪ್ರಶಸ್ತಿ ಜಯಿಸಿದ್ದ ಆತಿಥೇಯ ವೆಸ್ಟ್‌ಇಂಡೀಸ್ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.

2017ರ ಐಸಿಸಿ ವರ್ಷದ ಮಹಿಳಾ ಟ್ವೆಂಟಿ-20 ತಂಡದ ನಾಯಕಿಯಾಗಿ ನೇಮಕಗೊಂಡಿರುವ ಸ್ಟೆಫಾನಿ ಟೇಲರ್ ಮತ್ತೊಮ್ಮೆ ವಿಂಡೀಸ್ ತಂಡವನ್ನು ನಾಯಕಿಯಾಗಿ ಮುನ್ನಡೆಸುವ ಸಾಧ್ಯತೆಯಿದೆ.

ಟೂರ್ನಿಯ ಮೊದಲ ಹಂತದ ಪಂದ್ಯಗಳು ಗಯಾನದ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದ್ದು, ಡರೆನ್ ಸಮ್ಮಿ ಸ್ಟೇಡಿಯಂ, ಸೈಂಟ್‌ಲೂಸಿಯಾ, ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ಆ್ಯಂಟಿಗುವಾ ಎರಡು ಸೆಮಿ ಫೈನಲ್‌ಗಳು ಹಾಗೂ ಫೈನಲ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News