ಅಂಡರ್-19 ವಿಶ್ವಕಪ್: ಪಾಕಿಸ್ತಾನ ಸೆಮಿ ಪೈನಲ್‌ಗೆ

Update: 2018-01-24 19:01 GMT

ಕ್ರೈಸ್ಟ್‌ಚರ್ಚ್, ಜ.24: ಆಲ್‌ರೌಂಡ್ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದೆ.

ಬುಧವಾರ ಇಲ್ಲಿ ನಡೆದ ಸೂಪರ್ ಲೀಗ್ ಕ್ವಾರ್ಟರ್ ಫೈನಲ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಅಲಿ ಝರ್ಯಾಬ್ (74, 111 ಎಸೆತ, 5 ಬೌಂಡರಿ)ಅರ್ಧಶತಕದ ಸಹಾಯದಿಂದ 2 ಬಾರಿಯ ಚಾಂಪಿಯನ್ ಪಾಕ್ ತಂಡ 47.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕವನ್ನು ವೇಗಿದ್ವಯರಾದ ಮುಹಮ್ಮದ್ ಮುಸಾ ಹಾಗೂ ಶಾಹೀನ್ ಅಫ್ರಿದಿ 9 ವಿಕೆಟ್‌ನಷ್ಟಕ್ಕೆ 189 ರನ್‌ಗೆ ನಿಯಂತ್ರಿಸಿದರು. 2014ರ ಚಾಂಪಿಯನ್ ದಕ್ಷಿಣ ಆಫ್ರಿಕವನ್ನು ಮಣಿಸಿರುವ ಪಾಕ್ ತಂಡ ಅ.30 ರಂದು ನಡೆಯುವ ಎರಡನೇ ಸೆಮಿ ಫೈನಲ್‌ನಲ್ಲಿ ಭಾರತ ಅಥವಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಭಾರತ-ಬಾಂಗ್ಲಾದೇಶ ಶುಕ್ರವಾರ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿವೆ. ಪಾಕ್ 111 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಸರೆಯಾದ ಅಲಿ ಟೂರ್ನಮೆಂಟ್‌ನಲ್ಲಿ 3ನೇ ಅರ್ಧಶತಕ ಸಿಡಿಸಿದರು. ಸತತ ಎರಡನೇ ಬಾರಿ ಪಂದ್ಯಶ್ರೇಷ್ಠ ಗೌರವ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News