ಒಮನ್: ಇಂಡಿಯನ್ ಪ್ರವಾಸಿ ಫೋರಂನಿಂದ ಪೈಗಾಂ- ಎ- ರಸೂಲ್ ಕಾರ್ಯಕ್ರಮ

Update: 2018-01-25 06:14 GMT

ಒಮನ್, ಜ.25: ಇಲ್ಲಿನ ಇಂಡಿಯನ್ ಪ್ರವಾಸಿ ಫೋರಂ ವತಿಯಿಂದ ಇತ್ತೀಚೆಗೆ ಮಸ್ಕತ್, ಸೊಹಾರ್ ಮತ್ತು ಸಲಾಲಾದಲ್ಲಿ ‘ಪೈಗಾಮ್-ಎ-ರಸೂಲ್’ - ಪ್ರವಾದಿ ಸಂದೇಶ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸದಸ್ಯ ಮೌಲಾನಾ ಮುಅಝ್ಝಿಂ ಸಿದ್ದೀಕಿ ಮಾತನಾಡಿ, "ಪ್ರವಾದಿ ಮುಹಮ್ಮದ್(ಸ.)ರವರನ್ನು ಕೇವಲ ಆಧ್ಯಾತ್ಮಿಕ ರೂಪಕ್ಕೆ ಮಾತ್ರ ಸೀಮಿತವಾಗಿಸದೆ ಅವರ ಸಾಮಾಜಿಕ ಕಳಕಳಿಯ ಜೀವನ ಸಂದೇಶವನ್ನು ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು. ಸಮುದಾಯದ ಕುಂದು ಕೊರತೆ, ಸಂಕಷ್ಟ, ಸಮಸ್ಯೆಗಳಿಗೆ ನಾವೆಷ್ಟುಸ್ಪಂದಿಸುತ್ತಿದ್ದೇವೆ ಎಂಬುವುದನ್ನು ಸ್ವತಃ ಮೆಲುಕು ಹಾಕಿ ಅವಲೋಕನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

'ನಾ ಝಲ್ಮ್ ಕರೋ ನಾ ಝಲ್ಮ್ ಕೀ ಹವಾಲೇ ಕರೋ' ಎಂಬುವುದು ಪ್ರವಾದಿವರ್ಯರ ಮಾತು. ಆದರೆ ಕಣ್ಣ ಮಂದೆಯೇ ಅನ್ಯಾಯ, ಅಕ್ರಮ ನಡೆಯುತ್ತಿರುವಾಗ ಮೌನ ತಾಳುವುದು ಮುಸ್ಲಿಮನ ಲಕ್ಷಣವಲ್ಲ. ಮಾನವನ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಕಾರ್ಯೋನ್ಮುಖರಾಗುವುದು ಪ್ರವಾದಿ ಚರ್ಯೆಯಾಗಿದೆ ಎಂದು ಮೌಲಾನ ವಿವರಿಸಿದರು.

ಇಂಡಿಯನ್ ಪ್ರವಾಸಿ ಫೋರಂನ ಅಧ್ಯಕ್ಷ ಮುಹಮ್ಮದ್ ಅನ್ವರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಳಿಕ ಅನಿವಾಸಿ ಭಾರತೀಯರ ಮಕ್ಕಳಿಗಾಗಿ ಕಿರಾಅತ್, ನಾತ್, ಭಾಷಣ, ಆಟೋಟ ಸ್ಪರ್ಧೆಗಳು, ಮಹಿಳೆಯರಿಗಾಗಿ ಪ್ರಬಂಧ ಸ್ಪರ್ಧೆ  ಏರ್ಪಡಿಸಲಾಗಿತ್ತು.

ಮಸ್ಕತ್'ನ ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಪಾಣೆಮಂಗಳೂರು ನೆರವೇರಿಸಿದರೆ, ಸೊಹಾರ್ ' ಕಾರ್ಯಕ್ರಮವನ್ನು  ಆಸಿಫ್ ಕಾರಾಜೆ, ಮೊಹಿದಿನ್, ಸಲಾಲದಲ್ಲಿ ಮುಹಮ್ಮದ್ ಫೈರೋಝ್, ಅನ್ವರ್ ಮಜೂರ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧಾಕೂಟದ ಎಲ್ಲಾ ಮಕ್ಕಳಿಗೂ ನೂರ್ ಪಡುಬಿದ್ರೆ ಬಹುಮಾನಗಳನ್ನು ವಿತರಿಸಿದರು. ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಆಸೀಫ್ ಬೈಲೂರು ಸಹಕರಿಸಿದರು. ಶಹಾಬುದ್ದೀನ್ ಕಾಟಿಪಳ್ಳ ಸ್ವಾಗತಿಸಿದರು. ಹಕೀಂ ಕಾಟಿಪಳ್ಳ ವಂದಿಸಿದರು.

ವರದಿ : ಅಬ್ದುಲ್ ಮುಬಾರಕ್ ಕಾರಾಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News