ವಿಷಾದ
Update: 2018-01-28 23:04 IST
ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಸಂತ್ರಸ್ತೆಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕುರಿತಂತೆ varthabharati.inನಲ್ಲಿ ಜ.28ರಂದು ಸಂಜೆ ವರದಿಯೊಂದು ಪ್ರಕಟವಾಗಿದ್ದು, ಇದರಲ್ಲಿ ಕಣ್ತಪ್ಪಿನಿಂದ ‘ರಾಮಕಥಾ ಗಾಯಕಿ ಪ್ರೇಮಲತಾ’ ಅವರ ಹೆಸರು ಪ್ರಸ್ತಾಪವಾಗಿದೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸಂತ್ರಸ್ತೆಗೂ ಪ್ರೇಮಲತಾ ಅವರಿಗೂ ಯಾವ ಸಂಬಂಧವೂ ಇಲ್ಲ. ಇದು ವರದಿಗಾರರ ಕಣ್ತಪ್ಪಿನಿಂದಾದ ಪ್ರಮಾದವಾಗಿದೆ. ಈ ವರದಿಯನ್ನು ಈಗಾಗಲೇ ವೆಬ್‌ಸೈಟ್‌ನಿಂದ ಹಿಂಪಡೆಯಲಾಗಿದೆ. ಈ ಪ್ರಮಾದಕ್ಕಾಗಿ varthabharati.in ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ.