ಫೆ. 2: ದುಬೈ ಕನ್ನಡಿಗರ ಬಳಗ ವತಿಯಿಂದ ಸರ್ವ ಧರ್ಮ ಸ್ನೇಹ ಕೂಟ

Update: 2018-02-01 12:51 GMT

ದುಬೈ, ಫೆ. 1: 'ನಮ್ಮ ನಡಿಗೆ ಸೌಹಾರ್ದದ ಕಡೆಗೆ' ಎಂಬ ದ್ಯೇಯ ವಾಕ್ಯದೊಂದಿಗೆ  ಫೆ. 2ರಂದು ಸಂಜೆ 6ಗಂಟೆಗೆ ದೇರಾ ದುಬೈಯಲ್ಲಿರುವ ಬೆಸ್ಟ್ ವೆಸ್ಟೆರ್ನ್ ಪ್ಲಸ್ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಗಲ್ಫ್ ಕನ್ನಡಿಗರ ಸ್ನೇಹ ಕೂಟ ನಡೆಯಲಿದೆ. 

ಈ ಕಾರ್ಯಕ್ರಮದಲ್ಲಿ ಯು ಎ ಇ ಕನ್ನಡ ಸಂಘಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದು, ಕ್ರಿಸ್ಮಸ್ ಮತ್ತು ಸಂಕ್ರಾಂತಿ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.  ಯು ಎ ಇ ಯಲ್ಲಿ ನೆಲಸಿರುವ ಕನ್ನಡಿಗರ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ. 

ಹೆಚ್ಚಿನ ಮಾಹಿತಿಗಾಗಿ ರಫೀಕಲಿ ಕೊಡಗು 0567012123, ಪೀಟರ್ ಜೋಯ್ಸನ್ 0501296644, ಯಮುನಾ ಮನೋಜ್ 0503453510, ನಾಸಿರ್ ಜಮಾದಾರ್ 0521935857 ಅವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News