ಖಾಸಗಿ ಸುದ್ದಿವಾಹಿನಿಯ ಮೇಲೆ ಐಟಿ ದಾಳಿ
Update: 2018-02-01 20:56 IST
ಬೆಂಗಳೂರು, ಫೆ.1: ರಾಜ್ಯದಲ್ಲಿನ ಕೆಲ ಪ್ರಮುಖ ರಾಜಕೀಯ ಮುಖಂಡರು ಬಂಡವಾಳ ಹೂಡಿರುವ ಖಾಸಗಿ ಸುದ್ದಿ ವಾಹಿನಿಯ ಕಚೇರಿಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಗುರುವಾರ ಬೆಳಗ್ಗೆಯೇ 8 ಮಂದಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಲೆಕ್ಕಪತ್ರ ಪರಿಶೀಲನೆ ನಡೆಸಿದೆ ಎಂದು ಗೊತ್ತಾಗಿದೆ.