ಬೆಂಗಳೂರು ವಿಶ್ವವಿದ್ಯಾಲಯ: ಬಿ.ಇಡಿ ಫಲಿತಾಂಶ ಪ್ರಕಟ
Update: 2018-02-01 21:09 IST
ಬೆಂಗಳೂರು, ಫೆ.1: ಬೆಂಗಳೂರು ವಿಶ್ವವಿದ್ಯಾಲಯ 2017ನೆ ಸಾಲಿನ ಬಿ.ಇಡಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.
ಗುರುವಾರ ವಿವಿಯ ವೆಬ್‌ಸೈಟ್ http://bangaloreuniversity.ac.in/ ನಲ್ಲಿ ಫಲಿತಾಂಶ ಪ್ರಕಟಿಸಿದೆ. ಸಂಬಂಧಪಟ್ಟ ಪ್ರಾಚಾರ್ಯರು ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಕಾಲೇಜುಗಳಲ್ಲಿ ಪ್ರಕಟಿಸುವಂತೆ ಕೋರಿದೆ.
ಒಟ್ಟಾರೆ 4,500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 48 ಸಾವಿರ ಉತ್ತರ ಪತ್ರಿಕೆಗಳಿದ್ದವು. ಸ್ಕಾನಿಂಗ್ ಮಾಡಿ ಮೌಲ್ಯಮಾಪನ ಮಾಡಲು ತಾಂತ್ರಿಕ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಮ್ಯಾನ್ಯುಯಲ್ ಆಗಿ ಮೌಲ್ಯಮಾಪನ ಮಾಡಿ ಸಾಧ್ಯವಾದಷ್ಟು ಬೇಗ ಫಲಿತಾಂಶವನ್ನು ನೀಡಿದ್ದೇವೆ ಎಂದು ಬೆಂ.ವಿವಿ ಮೌಲ್ಯಮಾಪನ ಕುಲಸಚಿವ ಶಿವರಾಜು ಹೇಳಿದ್ದಾರೆ.