ಕೇಂದ್ರ ಬಜೆಟ್- 2018: ನಿರಾಶದಾಯಕ ಬಜೆಟ್; ಆರ್.ಹನುಮಂತೇಗೌಡ
Update: 2018-02-01 23:10 IST
ನಿರಾಶದಾಯಕ ಬಜೆಟ್
ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿಮೂಲ ಸೌಕರ್ಯ, ಕೌಶಲ್ಯಾಭಿವೃದ್ಧಿ, ಉತ್ಪಾದನೆ, ಉದ್ಯೋಗ ಸೃಷ್ಟಿ ಹಾಗೂ ಮುದ್ರಾಬ್ಯಾಂಕ್ ಸೌಲಭ್ಯಗಳಿಗೆ ಒತ್ತು ನೀಡಲಾಗಿದೆ. ಅಲ್ಲದೆ ರೈತರ ವರಮಾನ, ಗ್ರಾಮೀಣ ಉದ್ಯೋಗ, ಮೂಲಭೂತ ಸೌಕರ್ಯಗಳು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸೂಕ್ಷ್ಮ, ಸಣ್ಣ-ಮಧ್ಯಮ ಕೈಗಾರಿಕೆಗಳ ತಾಂತ್ರಿಕ ಉನ್ನತೀಕರಣಕ್ಕೆ ಎಂಎಸ್‌ಎಂಇ ನೀತಿ ಕುರಿತಂತೆ ಬಜೆಟ್ ಪೂರ್ವದಲ್ಲೆ ಸಭೆ ನಡೆಸಿ, ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ, ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ಕೇಂದ್ರದ ಬಜೆಟ್‌ನಲ್ಲಿ ಪೂರಕ ಬೆಳವಣಿಗೆಗೆ ಆದ್ಯತೆ ನೀಡದಿರುವುದು ನಿರಾಶೆ ಮೂಡಿಸಿದೆ.
-ಆರ್.ಹನುಮಂತೇಗೌಡ, ಕಾಸಿಯಾ ಅಧ್ಯಕ್ಷ