ಬಾಂಗ್ಲಾ ವಿರುದ್ಧ ಲಂಕೆಯ ಉತ್ತಮ ಆರಂಭ

Update: 2018-02-01 18:39 GMT

ಚಿತ್ತಗಾಂಗ್, ಫೆ.1: ಇಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಶ್ರೀಲಂಕಾದ ಕುಸಾಲ್ ಮೆಂಡಿಸ್ ಶತಕ ದಾಖಲಿಸಿದ್ದಾರೆ.

 ಟೆಸ್ಟ್‌ನ ಎರಡನೇ ದಿನವಾಗಿರುವ ಗುರುವಾರ ದಿನದಾಟದಂತ್ಯಕ್ಕೆ ಶ್ರೀಲಂಕಾ 48 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿದೆ.

ಔಟಾಗದೆ 83 ರನ್ ಗಳಿಸಿರುವ ಕುಸಾಲ್ ಮೆಂಡಿಸ್ ಮತ್ತು 104 ರನ್ ಗಳಿಸಿರುವ ಧನಂಜಯ್ ಡಿ ಸಿಲ್ವ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ ದಾಖಲಿಸಿದ 513 ರನ್‌ಗಳಿಗೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಖಾತೆ ತೆರೆಯುವ ಮೊದಲೇ ಮೊದಲ ವಿಕೆಟ್ ಕಳೆದುಕೊಂಡಿತು.

 ಆರಂಭಿಕ ದಾಂಡಿಗ ದ್ವಿಮುತ್ ಕರುಣರತ್ನೆ (0) ಅವರು 2.3ನೇ ಓವರ್‌ನಲ್ಲಿ ಮೆಹಿದಿ ಹಸನ್ ಮಿರಾಝ್ ಎಸೆತದಲ್ಲಿ ಇಮ್ರುಲ್ ಖೈಸ್‌ಗೆ ಕ್ಯಾಚ್ ನೀಡಿದರು.

ಎರಡನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಮತ್ತು ಡಿ ಸಿಲ್ವ ಜೊತೆಯಾದರು. ಇವರು ಮುರಿಯದ ಜೊತೆಯಾಟದಲ್ಲಿ 187 ರನ್ ಗಳಿಸಿ ಬ್ಯಾಟಿಂಗ್‌ನಲ್ಲಿ ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ.

ಧನಂಜಯ ಡಿ ಸಿಲ್ವ ಅವರು 122 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 4ನೇ ಶತಕ ದಾಖಲಿಸಿದರು. ಅವರು 127 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 104 ರನ್ ಗಳಿಸಿದ್ದಾರೆ.

ಧನಂಜಯ್ ಡಿ ಸಿಲ್ವ ಅವರು ಕಳೆದ ಡಿಸೆಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ಭಾರತದ ವಿರುದ್ಧದ ಟೆಸ್ಟ್ ನಲ್ಲಿ 119 ರನ್ ಗಳಿಸಿದ್ದರು.

 ಮೆಂಡಿಸ್ ಟೆಸ್ಟ್‌ನಲ್ಲಿ 4ನೇ ಶತಕದ ಹಾದಿಯಲ್ಲಿದ್ದಾರೆ. ಅವರು 152 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 83 ರನ್ ಗಳಿಸಿದರು.

ಬಾಂಗ್ಲಾ 513: ಇದಕ್ಕೂ ಮೊದಲು ಬಾಂಗ್ಲ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 129.5 ಓವರ್‌ಗಳಲ್ಲಿ 513 ರನ್‌ಗಳಿಗೆ ಆಲೌಟಾಗಿದೆ.

   ಟೆಸ್ಟ್‌ನ ಮೊದಲ ದಿನವಾಗಿರುವ ಬುಧವಾರ ಬಾಂಗ್ಲಾದೇಶ ತಂಡ ಮೊಮಿನುಲ್ ಹಕ್ ಶತಕದ ನೆರವಿನಲ್ಲಿ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 374 ರನ್ ಗಳಿಸಿತ್ತು. ಈ ಮೊತ್ತಕ್ಕೆ ಇಂದು 139 ರನ್ ಸೇರಿಸಿತು. ಔಟಾಗದೆ 175 ರನ್ ಗಳಿಸಿದ್ದ ಹಕ್ ಬ್ಯಾಟಿಂಗ್ ಮುಂದುವರಿಸಿ ತನ್ನ ಖಾತೆಗೆ ಕೇವಲ 1 ರನ್ ಸೇರಿಸಿ ಔಟಾದರು. ಅವರು 176 ರನ್ ಗಳಿಸಿ ಹೆರಾತ್ ಬೌಲಿಂಗ್‌ನಲ್ಲಿ ಮೆಂಡಿಸ್‌ಗೆ ಕ್ಯಾಚ್ ನೀಡಿದರು.ಇವರ ಜೊತೆ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ನಾಯಕ ಮಹ್ಮುದುಲ್ಲಾ ಹೋರಾಟ ಮುಂದುವರಿಸಿ 83 ರನ್ ಗಳಿಸಿ ಅಜೇಯರಾಗಿ ಉಳಿದರು.

  ಮೊಸಾದೆಕ್ ಹುಸೈನ್ 8 ರನ್, ಮೆಹಿದಿ ಹಸನ್ ಮಿರಾಝ್ 20 ರನ್, ಸುಂಝಾಮುಲ್ ಇಸ್ಲಾಂ 24 ರನ್, ತೈಜುಲ್ ಇಸ್ಲಾಂ 1 ರನ್, ಮುಸ್ತಾಫಿಝುರ್ರಹ್ಮಾನ್ 8 ರನ್ ಗಳಿಸಿ ಔಟಾದರು.

ಶ್ರೀಲಂಕಾದ ಲಕ್ಮಲ್ ಮತ್ತು ಹೆರಾತ್ ತಲಾ 2 ವಿಕೆಟ್, ಸಂಡಕನ್ 92ಕ್ಕೆ 2 ಮತ್ತು ಪೆರೆರಾ 1 ವಿಕೆಟ್ ಪಡೆದರು.

►ಸಂಕ್ಷಿಪ್ತ ಸ್ಕೋರ್ ವಿವರ

ಬಾಂಗ್ಲಾದೇಶ ತಂಡ 129.5 ಓವರ್‌ಗಳಲ್ಲಿ ಆಲೌಟ್ 513

(ಮೊಮಿನುಲ್ ಹಕ್ 176, ಮಹ್ಮುದುಲ್ಲಾ ಔಟಾಗದೆ 83, ತಮೀಮ್ ಇಕ್ಬಾಲ್ 52, ಇಮ್ರುಲ್ ಕೈಸ್ 40; ಲಕ್ಮಲ್ 68ಕ್ಕೆ 3).

ಶ್ರೀಲಂಕಾ ಮೊದಲ ಇನಿಂಗ್ಸ್ 48 ಓವರ್‌ಗಳಲ್ಲಿ 187/1

(ಧನಂಜಯ್ ಡಿ ಸಿಲ್ವ ಔಟಾಗದೆ 104, ಮೆಂಡೀಸ್ ಔಟಾಗದೆ 83; ಹಸನ್ ಮಿರಾಝ್ 45ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News