ಯುಎಇಯಲ್ಲಿ ಜಗತ್ತಿನ ಅತಿ ಉದ್ದದ ಝಿಪ್ ಲೈನ್

Update: 2018-02-02 17:01 GMT

ರಾಸ್ ಅಲ್-ಖೈಮಾ (ಯುಎಇ), ಫೆ. 2: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಜಗತ್ತಿನ ಅತಿ ಉದ್ದದ ಝಿಪ್ ಲೈನ್ (ಎರಡು ಬೆಟ್ಟಗಳ ನಡುವಿನ ಕಣಿವೆ ದಾಟಲು ಬಳಸುವ ತಂತಿ) ಆರಂಭಗೊಂಡಿದೆ.

2.83 ಕಿ.ಮೀ. ಉದ್ದದ ಝಿಪ್ ಲೈನ್ ಜಗತ್ತಿನ ಅತಿ ಉದ್ದದ ತಂತಿ ಎಂಬುದಾಗಿ ಗಿನ್ನೆಸ್ ವಿಶ್ವ ದಾಖಲೆಗಳ ಅಧಿಕಾರಿಗಳು ಉದ್ಘಾಟನೆಗೊಂಡ ದಿನವೇ ಪ್ರಮಾಣಪತ್ರ ನೀಡಿದ್ದಾರೆ.

ರಾಸ್ ಅಲ್-ಖೈಮಾದಲ್ಲಿ ನಿರ್ಮಿಸಲಾಗಿರುವ ಝಿಪ್ ಲೈನ್, ಸಾಹಸಿಗಳನ್ನು ಸಮುದ್ರ ಮಟ್ಟದಿಂದ 1,680 ಮೀಟರ್ ಎತ್ತರದ ಜೆಬೆಲ್ ಜೈಸ್ ಪರ್ವತದ ತುದಿಯಿಂದ ಕೆಳಗೆ ಸಾಗಿಸುತ್ತದೆ.

ತಂತಿಯ ಮೇಲಿನ ಈ ಪ್ರಯಾಣದ ಅವಧಿಯಲ್ಲಿ ಸವಾರರು 3 ನಿಮಿಷಗಳ ಕಾಲ ಗಾಳಿಯಲ್ಲಿ ತೇಲುತ್ತಾರೆ.

 ಹೆಚ್ಚು ಪ್ರಚಾರದಲ್ಲಿಲ್ಲದ ರಾಸ್ ಅಲ್-ಖೈಮಾ ಎಮಿರೇಟ್ ಪ್ರವಾಸಿಗರನ್ನು ಮತ್ತು ಅಬುಧಾಬಿ ಮತ್ತು ದುಬೈ ಮುಂತಾದ ನೆರೆಯ ಎಮಿರೇಟ್‌ಗಳ ವಿದೇಶಿ ನಿವಾಸಿಗಳನ್ನು ತನ್ನಲ್ಲಿಗೆ ಆಕರ್ಷಿಸಲು ಈ ಕ್ರಮವನ್ನು ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News