ಇನ್ನೊಂದು ಬೆಳಕಿನ ಮೂಲದ ಮುಂದೆ ಬೆಂಕಿಕಡ್ಡಿಯ ಜ್ವಾಲೆಯ ನೆರಳೇಕೆ ಕಾಣುವುದಿಲ್ಲ?

Update: 2018-02-03 10:28 GMT

ಇನ್ನೊಂದು ಬೆಳಕಿನ ಮೂಲ ಮತ್ತು ಪರದೆ ಅಥವಾ ಗೋಡೆಯ ನಡುವೆ ಉರಿಯುತ್ತಿರುವ ಬೆಂಕಿಕಡ್ಡಿಯನ್ನು ಹಿಡಿದು ನೋಡಿ. ಪರದೆಯ ಮೇಲೆ ನಿಮಗೆ ಬೆಂಕಿಕಡ್ಡಿಯ ನೆರಳು ಮಾತ್ರ ಕಾಣುತ್ತದೆ, ಆದರೆ ಅದರ ಜ್ವಾಲೆಯ ನೆರಳು ಮಾತ್ರ ಕಾಣಿಸುವುದಿಲ್ಲ. ಹೀಗೇಕೆ ಎನ್ನುವುದು ನಿಮ್ಮ ತಲೆ ತಿನ್ನುತಿದ್ದರೆ ಇಲ್ಲಿದೆ ಉತ್ತರ....

ನೆರಳು ಬೆಳಕಿನ ಮೂಲದ ಮುಂದಿರುವ ಅಪಾರದರ್ಶಕ ವಸ್ತುವಿನ ಹಿಂಬದಿಯಲ್ಲಿ ಬೆಳಕಿನ ದಿಕ್ಕಿನಲ್ಲಿ ಸೃಷ್ಟಿಯಾಗುವ ಬೆಳಕುರಹಿತ ಪ್ರದೇಶವಾಗಿದೆ. ಬೆಳಕು ಹಾದು ಹೋಗುವ ದಾರಿಯಲ್ಲಿನ ಅಪಾರದರ್ಶಕ ವಸ್ತುವು ತನ್ನ ಹಿಂದೆ ಬೀಳಬಹುದಾದ ಆ ಬೆಳಕನ್ನು ತಡೆಯುತ್ತದೆ ಮತ್ತು ಇದರ ಪರಿಣಾಮವಾಗಿ ನೆರಳು ರೂಪುಗೊಳ್ಳುತ್ತದೆ.

 ಉರಿಯುತ್ತಿರುವ ಬೆಂಕಿಕಡ್ಡಿಯನ್ನು ಇನ್ನೊಂದು ಬೆಳಕಿನ ಮೂಲದ ಮುಂದೆ ಹಿಡಿದಾಗ ಅಪಾರದರ್ಶಕ ವಸ್ತುವಾಗಿರುವ ಬೆಂಕಿಕಡ್ಡಿಯು ಆ ಮೂಲದಿಂದ ಬರುವ ಬೆಳಕಿಗೆ ಅಡ್ಡಿಯನ್ನೊಡ್ಡುತ್ತದೆ ಮತ್ತು ತನ್ನ ಹಿಂದಿರುವ ಪರದೆಯ ಮೇಲೆ ನೆರಳನ್ನು ಮೂಡಿಸುತ್ತದೆ.

 ಬೆಂಕಿಕಡ್ಡಿಯ ಜ್ವಾಲೆಯು ಸ್ವಯಂ ಬೆಳಕಿನ ಮೂಲವಾಗಿದೆ. ಜ್ವಾಲೆಯು ತನ್ನ ಹಿಂದಿರುವ ಜಾಗದಲ್ಲಿ ತನ್ನದೇ ಆದ ಬೆಳಕನ್ನು ಚೆಲ್ಲುತ್ತದೆ ಮತ್ತು ಇತರ ಮೂಲದ ಬೆಳಕನ್ನು ತಡೆಹಿಡಿಯಲೂ ಅದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪರದೆಯ ಮೇಲೆ ಜ್ವಾಲೆಯ ನೆರಳು ಮೂಡುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News