ಮಹಾ ನಗರಗಳ ಅವಸಾನ

Update: 2018-02-03 12:00 GMT

ಸಿರಿಯಾದ ಅಂತರ್ಯುದ್ಧಕ್ಕೆ ಸಿಲುಕಿ ಈ ಅದ್ಭುತ ನಗರಗಳೀಗ ಅವಸಾನದತ್ತ ಸಾಗಿವೆ. ಎತ್ತ ನೋಡಿದರೂ ಮುರಿದು ಬಿದ್ದಿರುವ ಕಟ್ಟಡಗಳ ಅವಶೇಷಗಳು, ಗುಂಡಿಬಿದ್ದ ರಸ್ತೆಗಳು, ನಿಶ್ಶಕ್ತಗೊಂಡ ಆರ್ಥಿಕತೆಗಳೆಲ್ಲಾ ಸೇರಿ ಜನಜೀವನವನ್ನು ದಯನೀಯ ಸ್ಥಿತಿಗೆ ದೂಡಿವೆ. ಅಲೆಪ್ಪೊ ಹಾಗೂ ರಖ್ಖಾ ನಗರಗಳನ್ನು ಐಸಿಸ್ ಬಂಡುಕೋರರಿಂದ ವಶಪಡಿಸಿ ಕೊಳ್ಳಲು ನಡೆದ ಸೈನಿಕ ಸಂಘರ್ಷದಲ್ಲಿ ಸಾವಿರಾರು ಅಮಾಯಕ ನಾಗರಿಕರೂ ಸಹ ಹತರಾದರು.

ನಾಗರಿಕತೆಗಳು ಹುಟ್ಟಿ ಬೆಳೆಯುವುದು, ನಂತರ ಕ್ಷೀಣಿಸಿ ಮರೆಯಾಗುವು ದನ್ನೆಲ್ಲಾ ನಾವು ನೋಡಿದ್ದೇವೆ. ಅಂತಹ ಪ್ರಾಚೀನ ನಾಗರಿಕತೆಯ ಕೆಲವು ಕುರುಹುಗಳು ನೇರ ನೋಟಕ್ಕೆ ಈಗಲೂ ಸಿಗುವಂತಿವೆ. ಹಲವನ್ನು ಉತ್ಖನನದ ಮೂಲಕ ಹೊರತೆಗೆಯಲಾಗುತ್ತಿದೆ.

ಆದರೆ ನಮ್ಮ ಸಮಕಾಲೀನ ಸಂದರ್ಭದಲ್ಲೇ ನಾವೇ ನಿರ್ಮಿಸಿರುವ ನಾಗರಿಕತೆಯ ಜಗತ್ತಿನ ಮಹಾನಗರಗಳನ್ನು ಧ್ವಂಸಗೊಳಿಸುತ್ತಿರುವ ವಿಧಾನವು ಆಘಾತಕಾರಿಯಾಗಿದೆ. ಜಾಗತಿಕ ಬಲಿಷ್ಠ ರಾಜಕೀಯ ಶಕ್ತಿಗಳ ಸೆಣೆಸಾಟ, ಯುದ್ಧೋದ್ಯಮದ ಲಾಭದ ಲೆಕ್ಕಾಚಾರಗಳು ಹಾಗೂ ಜನಾಂಗ-ಧರ್ಮ-ಭಾಷಿಕರ ಹಕ್ಕುಗಳ ಕದನದಲ್ಲಿ ಸಿಲುಕಿ ಬೈರೂತ್, ಡೆಮಾಸ್ಕಸ್, ಅಲೆಪ್ಪೊ, ರಖ್ಖಾ.... ಮುಂತಾದ ಅದ್ಭುತ ನಗರಗಳೀಗ ಅವಸಾನ ದತ್ತ ಸಾಗಿವೆ.

ನಿರಂತರ ಬಾಂಬ್ ದಾಳಿ, ನಿತ್ಯ ಗುಂಡಿನ ಕಾಳಗ, ವಿದೇಶಿ ಸೈನಿಕರು, ಸ್ವದೇಶಿ ಬಂಡಾಯಗಾರರು, ಯುದ್ಧ ವ್ಯಾಪಾರಿಗಳು, ಕೂಲಿ ಸಿಪಾಯಿಗಳ ನಡುವೆ ಸಿಲುಕಿ ಈ ಮಹಾನ್ ಐತಿಹಾಸಿಕ ನಗರಗಳ ಲಕ್ಷಾಂತರ ಜನ ಅನೇಕ ಬವಣೆಗಳನ್ನು ಅನುಭವಿಸುತ್ತಿದ್ದಾರೆ. ಜೊತೆಗೆ ತಾವು ಹುಟ್ಟಿದ, ಆಡಿ ಬೆಳೆದ ತಮ್ಮ ಪ್ರೀತಿಯ ನಗರ ಧ್ವಂಸಗೊಳ್ಳುತ್ತಾ ಕುಸಿಯುತ್ತಿರುವುದನ್ನು ಬಹಳ ಸಂಕಟ ದಿಂದ ನೋಡುತ್ತಾ, ಏನೂ ಮಾಡಲಾಗದ ಅಸಹಾಯ ಕತೆಯಿಂದ ನೊಂದುಕೊಳ್ಳುತ್ತಾ ಕಾಲ ದೂಡುತ್ತಿದ್ದಾರೆ.

ಈ ಯುದ್ಧ, ಕ್ಷೋಭೆ, ಅನಿಶ್ಚಿತೆಗಳ ಬದುಕೇ ಬೇಡ ವೆಂದು ಅಸಂಖ್ಯ ಜನ ಈ ಪತನಪೀಡಿತ ನಗರಗಳನ್ನು ತ್ಯಜಿಸಿ ದೂರ ಹೋಗಿದ್ದಾರೆ. ಆದರೆ ಅನೇಕರಿಗೆ ಆ ಭಾಗ್ಯವೂ ಇಲ್ಲ. ತಮ್ಮ ಜೀವನ ನಿರ್ವಹಣೆಗೆ, ಕೆಲಸ, ವ್ಯಾಪಾರ, ಮಕ್ಕಳ ಶಿಕ್ಷಣ ಮುಂತಾದ ಕಾರಣಗಳು ಅವರನ್ನು ಅನಿವಾರ್ಯವಾಗಿ ಈ ನಗರಗಳಲ್ಲೇ ಉಳಿಸಿದೆ. ಆಕಾಶದಿಂದ ಬಂದೆರಗುವ ಬಾಂಬ್ ದಾಳಿಯೊಂದು ಕಟ್ಟಡವೊಂದನ್ನು ಧ್ವಂಸಗೊಳಿಸಬಹುದು. ಅಗೋಚರ ಸ್ಥಳದಿಂದ ಸಿಡಿದು ಬರುವ ಬಂದೂಕಿನ ಗುಂಡೊಂದು ಯಾರನ್ನು ಬೇಕಾದರೂ ನೆಲಕ್ಕುರುಳಿಸಬಹುದು.... ಇದು ಅಲ್ಲಿನ ಪ್ರತೀ ಗಳಿಗೆಯ ಸ್ಥಿತಿ.

ಡೆಮಾಸ್ಕಸ್ ನಗರವು ಸಿರಿಯಾದ ರಾಜಧಾನಿ ಮಾತ್ರ ವಲ್ಲ ಜಗತ್ತಿನ ಅತೀ ಪ್ರಾಚೀನ ನಗರಗಳಲ್ಲಿ ಒಂದೆನಿಸಿ ಕೊಂಡಿದೆ. ಜನಸಂಖ್ಯೆ ಸುಮಾರು 17 ರಿಂದ 20 ಲಕ್ಷ. ಡೆಮಾಸ್ಕಸ್ ಅಂದರೆ ಅರೆಬಿಕ್ ಭಾಷೆಯಲ್ಲಿ ‘ಮಲ್ಲಿಗೆ’ ಎಂದು.

ಮೆಡಿಟರೇನಿಯನ್ ಸಮುದ್ರದ ಪೂರ್ವಕ್ಕೆ ಹರಡಿಕೊಂಡಿರುವ ಡೆಮಾಸ್ಕಸ್ ನಗರ ದಲ್ಲಿ ಬರದಾ ನದಿ ಹರಿದು ಹೋಗುತ್ತದೆ. ಸೈನಿಕ ಸಂಘರ್ಷದ ಪರಿಣಾಮವೇ ಇರಬೇಕು 2004ರಲ್ಲಿ 21 ಲಕ್ಷದಷ್ಟಿದ್ದ ನಗರದ ಜನಸಂಖ್ಯೆಯು ನಂತರ ಕುಸಿದು ಈಗ 17 ಲಕ್ಷದ ಆಸುಪಾಸಿನಲ್ಲಿದೆ.

ಕ್ರಿ.ಶ. 6, 7ನೇ ಶತಮಾನದಿಂದಲೂ ಅರಬ್ ಜಗತ್ತಿನ ಕೇಂದ್ರ ಸ್ಥಾನವಾಗಿ ಬೆಳೆದು ಬಂದಿರುವ ಡೆಮಾಸ್ಕಸ್ ನಗರವು ಇದೀಗ ಅಮೆರಿಕ ಬೆಂಬಲಿತ ಉಗ್ರವಾದಿಗಳ ದಾಳಿಗೆ ಸಿಲುಕಿ ನಲುಗಿ ಹೋಗಿದೆ. ಸಿರಿಯಾದ ಇತರ ದೊಡ್ಡ ನಗರಗಳಾಗಿರುವ ಅಪ್ಪೋ ಹಾಗೂ ರಖ್ಖಾಗಳ ಸ್ಥಿತಿಯೂ ಇದೇ ಆಗಿದೆ.

ಸಿರಿಯಾದ ಅಂತರ್ಯುದ್ಧಕ್ಕೆ ಸಿಲುಕಿ ಈ ಅದ್ಭುತ ನಗರಗಳೀಗ ಅವಸಾನದತ್ತ ಸಾಗಿವೆ. ಎತ್ತ ನೋಡಿದರೂ ಮುರಿದು ಬಿದ್ದಿರುವ ಕಟ್ಟಡಗಳ ಅವಶೇಷಗಳು, ಗುಂಡಿಬಿದ್ದ ರಸ್ತೆಗಳು, ನಿಶ್ಶಕ್ತಗೊಂಡ ಆರ್ಥಿಕತೆಗಳೆಲ್ಲಾ ಸೇರಿ ಜನಜೀವನವನ್ನು ದಯನೀಯ ಸ್ಥಿತಿಗೆ ದೂಡಿವೆ. ಅಲೆಪ್ಪೊ ಹಾಗೂ ರಖ್ಖಾ ನಗರಗಳನ್ನು ಐಸಿಸ್ ಬಂಡುಕೋರರಿಂದ ವಶಪಡಿಸಿ ಕೊಳ್ಳಲು ನಡೆದ ಸೈನಿಕ ಸಂಘರ್ಷದಲ್ಲಿ ಸಾವಿರಾರು ಅಮಾ ಯಕ ನಾಗರಿಕರೂ ಸಹ ಹತರಾದರು.

ಹಾಗೆ ನೋಡಿದರೆ ಸಿರಿಯಾ ದೇಶವು ಅರಬ್ ಜಗತ್ತಿನ ಇರಾಕ್, ಕುವೈತ್, ಇರಾನ್, ಸೌದಿ ಅರೇಬಿಯಾಗಳ ರೀತಿ ತೈಲ ಸಂಪದ್ಭರಿತ ದೇಶವೇನಲ್ಲ. ಅದಕ್ಕೆ ವಿಶ್ವರಾಜಕೀಯಗಳ ಆಗು ಹೋಗುಗಳಲ್ಲೂ ಭೌಗೋಳಿಕವಾಗಿಯಾಗಲಿ, ಮಿಲಿಟರಿ ದೃಷ್ಟಿಯಿಂದಲಾಗಲಿ ಅಂತಹ ಮಹತ್ವದ, ನಿರ್ಣಾಯಕ ಸ್ಥಾನವೇನಿಲ್ಲ. ಆದರೆ ಅರಬ್ ಜಗತ್ತಿನಲ್ಲಿ ನಡೆಯುತ್ತಿರುವ ಅಧಿಕಾರ, ಸಂಪತ್ತಿನ ಮೇಲಿನ ಅಧಿಪತ್ಯಕ್ಕಾಗಿನ ಸಂಘರ್ಷದಲ್ಲಿ ಅದರ ನೆರೆ ಹೊರೆಯ ದೇಶಗಳೂ ಬಲಿಯಾಗುತ್ತಿರುವುದು ಈಗ ಕಾಣುತ್ತಿದೆ.

ಬಹುಶಃ ಸಿರಿಯಾ ಸಹ ಅದರಲ್ಲೊಂದಾಗಿರಬಹುದು. ನಾವು ಕಳೆದುಕೊಳ್ಳುವ ಒಂದೊಂದು ಪರಂಪರೆಯು ನಾಶವಾ ಗುತ್ತಿರುವ ನಗರಗಳು ಕುಬ್ಜಗೊಳ್ಳುವ ನಾಗರಿಕತೆಗಳೆಲ್ಲಾ ಮನುಷ್ಯ ಜನಾಂಗವು ಸೃಷ್ಟಿಸಬಹುದಾದ ಘೋರ ಅನಾಹುತ ಗಳಿಗೆ ಜೀವಂತ ಸಾಕ್ಷಿಗಳಂತಿವೆ.

ಅಲೆಪ್ಪೊ ನಗರದ ಸದ್ಯದ ಪರಿಸ್ಥಿತಿ

ಡೆಮಾಸ್ಕಸ್ ನಗರದಲ್ಲಿ ಬಾಂಬ್‌ಗಳ ಅಟ್ಟಹಾಸ

Writer - ದೇವಿ ನಾಯಕ್

contributor

Editor - ದೇವಿ ನಾಯಕ್

contributor

Similar News