ಪುಣೆ: ಫುಟ್ ಪಾತ್ ನಲ್ಲಿ ವಾಸಿಸುತ್ತಿದ್ದ ಸೇನೆಯ ಮಾಜಿ ಕ್ಯಾಪ್ಟನ್ ರ ಥಳಿಸಿ ಹತ್ಯೆ

Update: 2018-02-04 07:37 GMT

ಪುಣೆ, ಫೆ.4: ಸೇನೆಯ ಮಾಜಿ ಕ್ಯಾಪ್ಟನ್ ಒಬ್ಬರ ಮೃತದೇಹವು ಇಲ್ಲಿನ ಕ್ಯಾಂಟೋನ್ ಮೆಂಟ್ ಏರಿಯಾದಲ್ಲಿ ಪತ್ತೆಯಾಗಿದ್ದು. ಇಬ್ಬರು ಅಪರಿಚಿತರು ಅವರನ್ನು ಥಳಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

67 ವರ್ಷದ ಮಾಜಿ ಕ್ಯಾಪ್ಟನ್ ರವೀಂದ್ರ ಬಾಲಿ ಫುಟ್ ಪಾತ್ ನಲ್ಲಿ ತಾತ್ಕಾಲಿಕ ಟೆಂಟ್ ಒಂದರಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಇಬ್ಬರು ವ್ಯಕ್ತಿಗಳು ಬಾಲಿಯವರಿಗೆ ಥಳಿಸುತ್ತಿರುವುದನ್ನು ಬಂಗಲೆಯೊಂದರ ಕಾವಲುಗಾರ ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಹಲವು ವರ್ಷಗಳಿಂದ ಬಾಲಿ ಕುಟುಂಬದೊಂದಿಗೆ ಸಂಪರ್ಕದಲ್ಲಿರಲಿಲ್ಲ. ತನಿಖೆಯ ವೇಳೆ ನಮಗೆ ಅವರ ಕುಟುಂಬದ ಮಾಹಿತಿ ಲಭಿಸಿದೆ” ಎಂದವರು ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News