×
Ad

ಬೆಂಗಳೂರು: 10 ನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನೋಂದಣಿ ಆರಂಭ

Update: 2018-02-05 23:09 IST

ಬೆಂಗಳೂರು, ಫೆ.5: ಬೆಂಗಳೂರು 10ನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.22 ರಿಂದ ಮಾ.1 ರವರೆಗೆ ನಡೆಯಲಿದ್ದು, ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ವೀಕ್ಷಕರ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ನೋಂದಣಿ ಶುಲ್ಕ ಸಾರ್ವಜನಿಕರಿಗೆ 600 ರೂ.ಗಳು, ವಿದ್ಯಾರ್ಥಿಗಳಿಗೆ, ಚಲನಚಿತ್ರೋದ್ಯಮ ಮತ್ತು ಚಿತ್ರ ಸಮಾಜದ ಸದಸ್ಯರಿಗೆ ಹಾಗೂ ಹಿರಿಯ ನಾಗರಿಕರಿಗೆ 300 ರೂ.ಗಳು ನಿಗಧಿಪಡಿಸಿದ್ದು, ಆಸಕ್ತರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಎಲ್ಲೆಲ್ಲಿ ನೋಂದಣಿ ಮಾಡಿಕೊಳ್ಳಬಹುದು: ಕರ್ನಾಟಕ ಚಲನಚಿತ್ರ ಅಕಾಡೆಮಿ, ಅಮೃತ ಮಹೋತ್ಸವ ಭವನ, ನಂ.20/ಎ, ನಂದಿನಿ ಎಫ್.ಎಚ್.ಎಸ್ ಲೇಔಟ್, ರೆಸಿಡೆನ್ಸಿ ಶಾಲೆ ಹತ್ತಿರ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಸಂಖ್ಯೆ.17, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, 1ನೆ ಮುಖ್ಯರಸ್ತೆ, ಹೈಗ್ರೌಂಡ್ಸ್, ಕ್ರೆಸೆಂಟ್ ರಸ್ತೆ, ಬೆಂಗಳೂರು ಹಾಗೂ ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2ನೆ ಹಂತ, ಬೆಂಗಳೂರು ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News