ಕೆ.ವಸಂತ ಕುಮಾರ್

Update: 2018-02-06 14:50 GMT

ಉಡುಪಿ, ಫೆ.6: ಮೂಲತಃ ಉಡುಪಿಯವರಾದ ಕೆ ವಸಂತ ಕುಮಾರ್ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು. ಅವರಿಗೆ 88 ವರ್ಷ ಪ್ರಾಯ ವಾಗಿತ್ತು. ಮೃತರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಉತ್ತಮ ನೃತ್ಯಪಟು, ನಾಟಕ, ಸಿನಿಮಾ ಕಲಾವಿದರಾದ ವಸಂತ ಕುಮಾರ್, ದೊಡ್ಡಣ್ಣ ಶೆಟ್ಟಿ ವಿರಚಿತ ‘ಮುತ್ತನ ಮದ್ವೆ ನಾಟಕದಲ್ಲಿ ಮುತ್ತನ ಪಾತ್ರದಲ್ಲಿ ಮಿಂಚಿದ್ದರು. ಗುಬ್ಬಿ ವೀರಣ್ಣ ನಾಟಕ ಕಂಪೆನಿಯಲ್ಲಿ ಡಾ.ರಾಜ್‌ಕುಮಾರ್‌ಗೆ ಮೇಕಪ್ ಮಾಡುತ್ತಿದ್ದರು. ಹಲವಾರು ನಾಟಕಗಳನ್ನು ರಚಿಸಿ,ಕೆಲವು ನಾಟಕಗಳ ಕ್ಯಾಸೆಟ್‌ಗಳನ್ನು ಬಿಡುಗಡೆಗೊಳಿಸಿದ್ದರು. ಈ ಕ್ಯಾಸೆಟ್‌ಗಳಲ್ಲಿ ಈಗ ಸಚಿವೆಯಾ ಗಿರುವ, ಪ್ರಸಿದ್ಧ ಕಲಾವಿದೆ ಉಮಾಶ್ರೀ ಪಾತ್ರವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ