×
Ad

5769 ಕೋಟಿ ಮೌಲ್ಯದ ಬೆಳೆಗಳನ್ನು ಖರೀದಿಸಲಾಗಿದೆ: ಕೃಷ್ಣಭೈರೇಗೌಡ

Update: 2018-02-06 23:48 IST

ಬೆಂಗಳೂರು, ಫೆ.6: ಕಳೆದ ನಾಲ್ಕುವರೆ ವರ್ಷಗಳಲ್ಲಿ ತೊಗರಿ, ಜೋಳ, ರಾಗಿ, ಮೆಕ್ಕೆ ಜೋಳ ಸೇರಿ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ 5769 ಕೋಟಿ ರೂ.ಮೌಲ್ಯದ ಬೆಳೆಗಳನ್ನು ಖರೀದಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
    
ಮಂಗಳವಾರ ವಿಧಾನ ಪರಿಷತ್‌ನಲ್ಲಿ ಜಯಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಸಾಲಿನಲ್ಲಿ ತೊಗರಿ, ಕ್ವಿಂಟಾಲ್‌ಗೆ 6 ಸಾವಿರ, ಜೋಳಕ್ಕೆ 2125 ರೂ,. ರಾಗಿಗೆ 2300 ರೂ ಹಾಗೂ ಮೆಕ್ಕೆ ಜೋಳಕ್ಕೆ 1425 ರೂ. ಬೆಂಬಲ ಬೆಲೆ ನೀಡಲಾಗಿದೆ ಎಂದು ಹೇಳಿದರು.

2018 ಫೆ.3ರರವರೆಗೆ 315468 ನೋಂದಾಯಿತ ರೈತರ ಪೈಕಿ 71.172 ರೈತರಿಂದ 11.33 ಲಕ್ಷ ಕ್ವಿಂಟಾಲ್‌ನಷ್ಟು ತೊಗರಿಯನ್ನು ಖರೀದಿಸಲಾಗಿದೆ. ತೊಗರಿ ಹಾಗೂ 27 ರೈತರಿಂದ 1147 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ. ಜೋಳಧಾರಣೆ ಕೇಂದ್ರ ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ 1725 ಅವುಗಳಿಗಿಂತ ಹೆಚ್ಚಿಗೆ ಇರುವ ಕಾರಣ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುವುದಿಲ್ಲ ಎಂದು ತಿಳಿಸಿದರು.

ಸದಸ್ಯೆ ಜಯಮ್ಮ ಬಾಲರಾಜ್ ಅವರು ಇನ್ನು ಹೆಚ್ಚಾಗಿ ಖರೀದಿ ಮಾಡುವ ಮೂಲಕ ರೈತರಿಗೆ ನೆರವಾಗಬೇಕೆಂದು ಕೋರಿದರು. ಅದಕ್ಕೆ ಉತ್ತರಿಸಿದ ಕೃಷಿ ಸಚಿವರು ಈಗಾಗಲೇ ಹೆಸರು, ಉದ್ದು, ಕಡ್ಲೇ ಕಾಳು ಸೇರಿ ವಿವಿಧ ಬೆಳೆಗಳ ಖರೀದಿ ಪ್ರಾರಂಭವಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಜೋಳ ಮತ್ತು ರಾಗಿಯನ್ನು ಮುಖ್ಯವಾಗಿ ಸ್ವಯಂ ಬಳಕೆಗಾಗಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿಯೂ ಉತ್ಪಾದನೆಯಾದ ಮೆಕ್ಕೆಜೋಳದಲ್ಲಿ ಶೇ.60ರಷ್ಟು ಹೊರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News