476 ಪಶುವೈದ್ಯರ ನೇಮಕ: ಎ.ಮಂಜು

Update: 2018-02-06 18:20 GMT

ಬೆಂಗಳೂರು, ಫೆ.6: ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಖಾಲಿಯಿದ್ದ 742 ಹುದ್ದೆಗಳ ಪೈಕಿ 476 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದೇವೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ.ಮಂಜು ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಎಸ್.ವ್ಹಿ.ಸಂಕನೂರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 1.2 ಕೋಟಿ ಜಾನುವಾರುಗಳಿದ್ದು, 5 ಸಾವಿರ ಜಾನುವಾರುಗಳಿಗೊಂದು ಆಸ್ಪತ್ರೆಯಿರಬೇಕು. ಆದರೆ, ಅಂದಾಜಿಗಿಂತಲೂ ಹೆಚ್ಚಿಗೆ ಪಶುವೈದ್ಯ ಆಸ್ಪತ್ರೆಗಳಿವೆ. ಹಾಗೆಯೇ ಸದ್ಯ 476 ವೈದ್ಯಾಧಿಕಾರಿಗಳನ್ನು ಭರ್ತಿ ಮಾಡಿ, ವೈದ್ಯರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ಪಶುವೈದ್ಯ ಸೇವಾ ಇಲಾಖೆಯಲ್ಲಿ 4 ಸಾವಿರ ಡಿ.ಗ್ರೂಪ್ ಹುದ್ದೆಗಳು ಖಾಲಿಯಿದ್ದು, ಸದ್ಯ 1600 ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು, ಅವರನ್ನೇ ಕಾಯಂಗೊಳಿಸಲು ಆದೇಶ ನೀಡಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News