ಬೆಂಗಳೂರು: ಬೆಸ್ಕಾಂನಿಂದ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

Update: 2018-02-07 17:23 GMT

ಬೆಂಗಳೂರು, ಫೆ.7: ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆಯನ್ನು ಉತ್ತೇಜಿಸಲು 11 ಕಡೆಗಳಲ್ಲಿ ‘ಎಲೆಕ್ಟ್ರಿಕಲ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್’ ನಿರ್ಮಿಸಲು ಬೆಸ್ಕಾಂ ಮುಂದಾಗಿದ್ದು, ಫೆ.15ರಂದು ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಮೊದಲ ಸ್ಟೇಷನ್‌ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.

ರಾಜ್ಯ ಸರಕಾರದ ವತಿಯಿಂದ ಎಲೆಕ್ಟ್ರಿಕಲ್ ವಾಹನ ನಿಯಮ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ಅನುಕೂಲವಾಗುವಂತೆ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಸ್ಟೇಷನ್‌ನಲ್ಲಿ ಶೀಘ್ರ ಚಾರ್ಜ್ ಮಾಡುವ ಡಿಸಿ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಎಸಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತದೆ.

ಈಗಾಗಲೇ ನಗರದ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಒಂದು ಸ್ಟೇಷನ್ ಸಿದ್ಧವಾಗಿದ್ದು, 420 ವೋಟ್ಸ್ ಸಾಮರ್ಥ್ಯದ ಸ್ಟೇಷನ್‌ನಲ್ಲಿ ದಿನಕ್ಕೆ 100 ವಾಹನಗಳ ಚಾರ್ಚ್ ಮಾಡಬಹುದಾಗಿದೆ. ಡಿಸಿ ಪಾಯಿಂಟ್‌ಗಳಲ್ಲಿ ವೇಗವಾಗಿ ಚಾರ್ಜ್ ಆಗಲಿದ್ದು, ಕೇವಲ 40-50 ನಿಮಿಷಗಳಲ್ಲಿ ಬ್ಯಾಟರಿ ಫುಲ್ ಆಗಲಿದೆ. ಒಂದು ಬಾರಿ ಬ್ಯಾಟರಿ ಭರ್ತಿಯಾದರೆ ಸುಮಾರು 140 ಕಿ.ಮೀ. ಸಂಚರಿಸಬಹುದಾಗಿದೆ. ಅದೇ ರೀತಿ ಎಸಿ ಪಾಯಿಂಟ್‌ನಲ್ಲಿ ಒಂದು ಬ್ಯಾಟರಿ ಫುಲ್ ಆಗಲು 6 ಗಂಟೆ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಘಟಕ ನಿರ್ಮಾಣಕ್ಕೆ ತಗಲುವ ವೆಚ್ಚ
-ಎಸಿ ಪಾಯಿಟ್‌ಗೆ 1 ಲಕ್ಷ ರೂ.
-ಡಿಸಿ ಪಾಯಿಂಗ್‌ಗೆ 5 ಲಕ್ಷ ರೂ.

1.89 ಲಕ್ಷ ಎಲ್‌ಇಡಿ ಬಲ್ಬ್ ವಿತರಣೆ
ಸರಕಾರದ ವತಿಯಿಂದ ಎಲ್‌ಇಡಿ ಬಲ್ಬ್ ನಿಯಮ ತರಲು ಮುಂದಾಗಿದ್ದು, ಇದುವರೆಗೆ ಬೆಸ್ಕಾಂ ವತಿಯಿಂದ 1.89 ಕೋಟಿ ಬಲ್ಬ್‌ಗಳನ್ನು ಮಾರಾಟ ಮಾಡಲಾಗಿದೆ.

ಬಲ್ಬ್‌ಗಳನ್ನು ಮಾರಾಟ ಮಾಡುವಂತಹ ಲೈನ್‌ಮೆನ್‌ಗಳಿಗೆ ಪ್ರೋತ್ಸಾಹ ಧನ ನೀಡುವ ಕುರಿತು ಸಹ ಚಿಂತನೆ ನಡೆಸಲಾಗುತ್ತಿದ್ದು, ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸಾರ್ವಜನಿಕರಿಗೆ ವಿಧಿಸಬೇಕಾದ ದರವನ್ನು ನಿಗದಿಪಡಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ಕೋರಲಾಗಿದೆ

-ಡಿ.ಕೆ.ಶಿವಕುಮಾರ್, ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News