ಪ್ಯಾರಾ ಪವರ್‌ ಲಿಫ್ಟರ್ ಸಕಿನಾ ಆತ್ಮಹತ್ಯೆ ಬೆದರಿಕೆ

Update: 2018-02-08 05:20 GMT

ಹೊಸದಿಲ್ಲಿ, ಫೆ.7: ಪ್ಯಾರಾ ಪವರ್ ಲಿಫ್ಟರ್ ಸಕೀನಾ ಖತುನ್ ಆಸ್ಟ್ರೇಲಿಯದಲ್ಲಿ ನಡೆಯಲಿರುವ 2018ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತವನ್ನು ಪ್ರತಿನಿಧಿಸುವ ತಂಡಕ್ಕೆ ಆಯ್ಕೆಯಾಗಿಲ್ಲ. ಒಂದು ವೇಳೆ, ಗೇಮ್ಸ್‌ಗೆ ನನ್ನ ಹೆಸರನ್ನು ಪರಿಗಣಿಸದೇ ಇದ್ದರೆ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಕಿನಾ ಬೆದರಿಕೆ ಹಾಕಿದ್ದಾರೆ.

 ‘‘ಗೇಮ್ಸ್‌ನಲ್ಲಿ ಭಾಗವಹಿಸುವ ಅಥ್ಲೀಟ್‌ಗಳ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ನಾನು ಕೊನೆಯ ತನಕ ಹೋರಾಡುವೆ. ಒಂದು ವೇಳೆ ನನ್ನ ಹೆಸರನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದರೆ ನಾನು ನ್ಯಾಯಾಲಯದ ಮೊರೆ ಹೋಗುವೆ ಅಥವಾ ಐಒಎ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವೆ. ನಾನು ಗೇಮ್ಸ್‌ನಲ್ಲಿ ಭಾಗವಹಿಸಲು ಕಳೆದ 4 ವರ್ಷಗಳಿಂದ ಕಾಯುತ್ತಿದ್ದು, ಆ ನಿಟ್ಟಿನಲ್ಲಿ ಕಠಿಣ ಶ್ರಮಪಟ್ಟಿದ್ದೇನೆ’’ ಎಂದು ಖತುನ್ ಹೇಳಿದ್ದಾರೆ.

28ರ ಹರೆಯದ ಖತುನ್ ಗ್ಲಾಸ್ಗೊದಲ್ಲಿ ನಡೆದ ಲೈಟ್‌ವೇಟ್ ವಿಭಾಗದಲ್ಲಿ ಕಂಚು ಜಯಿಸಿದ ಭಾರತದ ಏಕೈಕ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್‌ನ ಅರ್ಹತಾ ಮಾನದಂಡವನ್ನು ಮುಟ್ಟಿದ್ದರೂ ಸಕಿನಾರನ್ನು ಭಾರತದ ಕಾಮನ್‌ವೆಲ್ತ್ ಗೇಮ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News