ಹಳ್ಳದಾಚೆ ವೆಂಕಟರಾಮಯ್ಯ

Update: 2018-02-08 15:11 GMT

ಉಡುಪಿ, ಫೆ.8:ಹಿರಿಯ ಯಕ್ಷಗಾನ ಕಲಾವಿದ ಎಚ್.ಕೆ. ವೆಂಕಟರಾಮಯ್ಯ (78) ಗುರುವಾರ ಮುಂಜಾನೆ ಚಿಕ್ಕಮಗಳೂರು ಜಿಲ್ಲೆಯ ಹಳ್ಳದಾಚೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರು ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಸ್ತ್ರೀ ವೇಷಧಾರಿಯಾಗಿ ಪ್ರಭಾವತಿ, ಚಿತ್ರಾಂಗದೆ, ಪ್ರಮೀಳೆ, ಮೀನಾಕ್ಷಿ, ಅಂಬೆ ಮುಂತಾದ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಇವರು ಬಳಿಕ ಪುರುಷ ವೇಷಗಳನ್ನು ನಿರ್ವಹಿಸುತ್ತಿದ್ದರು. ಚಂದಿಕೇಶ್ವರ, ಕುಂಡಾವು, ಕೂಡ್ಲು, ಮಂದಾರ್ತಿ, ಪುತ್ತೂರು, ಮೂಲ್ಕಿ, ಸಾಲಿಗ್ರಾಮ, ಮಾರಣಕಟ್ಟೆ, ಬಾಳೆಹೊಳೆ ಮುಂತಾದ ಮೇಳಗಳಲ್ಲಿ 25 ವರ್ಷಗಳಿಗೂ ವಿುಕ್ಕಿ ಕಲಾವಿದರಾಗಿ ಸೇವೆಸಲ್ಲಿಸಿದ್ದಾರೆ.

ಮೂಲತ: ಬಡಗುತಿಟ್ಟು ಯಕ್ಷ ಕಲಾವಿದರಾದ ಇವರು ತೆಂಕುತಿಟ್ಟಿನಲ್ಲೂ ವೇಷ ನಿರ್ವಹಿಸುತ್ತಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಹಾಗೂ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿಗಳಿಗೆ ಭಾಜನರಾದ ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೇಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ