ಅಕ್ರಮ ಔಷಧಿ ಮಾರಾಟ ಜಾಲ

Update: 2018-02-09 04:37 GMT

ಮಾನ್ಯರೇ,

ರಾಷ್ಟ್ರೀಯ ಔಷಧಿ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ಔಷಧಿ ಮಾರಾಟ ಮಾಡುವುದು ಶಿಕ್ಷಾರ್ಹ ಎಂಬುದು ಗೊತ್ತಿದ್ದರೂ ದೇಶದಲ್ಲಿ ನಕಲಿ ಮತ್ತು ಕಳಪೆ ಗುಣಮಟ್ಟದ ಅನಧಿಕೃತ ಔಷಧಿಗಳ ತಯಾರಿಕೆ ಹಾಗೂ ಮಾರಾಟ ಯಾರ ಭಯವೂ ಇಲ್ಲದೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಅಕ್ರಮ ಔಷಧಿಗಳಿಂದ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಇತ್ತೀಚೆಗೆ ಬ್ರಿಟಿಷ್ ಜರ್ನಲ್ ಆಫ್ ಕ್ಲಿನಿಕಲ್ ಫಾರ್ಮಕಾಲಜಿ ಸಂಸ್ಥೆ ನೀಡಿರುವ ವರದಿ ಪ್ರಕಾರ ದೇಶದಲ್ಲಿ ಶೇ.64ರಷ್ಟು ಆ್ಯಂಟಿಬಯಾಟಿಕ್ ಔಷಧಿಯನ್ನು ಕಡಿಮೆ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆತಂಕಕಾರಿ ವಿಷಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ಅಕ್ರಮ ಔಷಧಿಗಳ ಮಾರಾಟದಿಂದ ಆರ್ಥಿಕ ವ್ಯವಸ್ಥೆಗೆ ಪ್ರತೀ ವರ್ಷಕ್ಕೆ 64.20ಲಕ್ಷ ಕೋಟಿ ರೂ.ನಷ್ಟು ನಷ್ಟ ಉಂಟಾಗುವುದಲ್ಲದೆ ಲಕ್ಷಾಂತರ ಮುಗ್ಧ ಬಡ ರೋಗಿಗಳು ಈ ಔಷಧಿಗಳ ಸೇವನೆಯಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಗುಣಮಟ್ಟವಲ್ಲದ ಔಷಧಿಗಳನ್ನು ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಇಂತಹ ಔಷಧಿ ಜಾಲಗಳನ್ನು ಪತ್ತೆ ಹಚ್ಚಿ ಅವುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಂಬಂಧ ಪಟ್ಟ ಆರೋಗ್ಯ ಇಲಾಖೆ ಗಮನಹರಿಸಲಿ.

Writer - -ವೌಲಾಲಿ ಕೆ., ಬೋರಗಿ, ಸಿಂದಗಿ

contributor

Editor - -ವೌಲಾಲಿ ಕೆ., ಬೋರಗಿ, ಸಿಂದಗಿ

contributor

Similar News