ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿದ ಬುರ್ಜ್ ಖಲೀಫಾ, ದುಬೈ ಫ್ರೇಮ್

Update: 2018-02-10 08:13 GMT

ಹೊಸದಿಲ್ಲಿ, ಫೆ.10: ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ದುಬೈಯ ಪ್ರಸಿದ್ಧ ಕಟ್ಟಡಗಳು ಶುಕ್ರವಾರ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸಿತು.

ಜಗತ್ತಿನ ಅತೀ ಹೆಚ್ಚು ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ, ತೈಲ ಕಂಪೆನಿ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪೆನಿ (ಎಡಿಎನ್ ಒಸಿ) ಹಾಗು ಜಗತ್ತಿನ ಅತೀ ದೊಡ್ಡ ಪಿಕ್ಚರ್ ಫ್ರೇಮ್ ಎಂಬ ಖ್ಯಾತಿಯ ದುಬೈ ಫ್ರೇಮ್ ಭಾರತದ ಧ್ವಜದ ಮೂರು ಬಣ್ಣಗಳಿಂದ ಕಂಗೊಳಿಸಿತು.

ಶನಿವಾರ ಸಂಜೆ ಪ್ರಧಾನಿ ಮೋದಿ ಅಬುಧಾಬಿಗೆ ತಲುಪಲಿದ್ದಾರೆ. ಅಲ್ಲಿ ಅವರು ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ರನ್ನು ಭೇಟಿಯಾಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News