ರಾಹುಲ್ ‘ಮಹದಾಯಿ ಸಮಸ್ಯೆ’ ಪ್ರಸ್ತಾಪಿಸದಿರುವುದು ರೈತರಿಗೆ ಬಗೆದ ದ್ರೋಹ : ಸುರೇಶ್ ಕುಮಾರ್
Update: 2018-02-10 21:07 IST
ಬೆಂಗಳೂರು, ಫೆ. 10: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಭೇಟಿ ವೇಳೆ ಗುಜರಾತ್ ಚುನಾವಣೆಯಲ್ಲಿ ಮಾಡಿದ ಭಾಷಣವನ್ನೇ ಇಲ್ಲಿಯೂ ಮಾಡಿದ್ದಾರೆ. ಆದರೆ, ಕರ್ನಾಟಕದ ಜ್ವಲಂತ ಸಮಸ್ಯೆಗಳಿದ್ದರೂ ಅವುಗಳನ್ನು ಪ್ರಸ್ತಾಪಿಸದೆ ಇರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಆಕ್ಷೇಪಿಸಿದ್ದಾರೆ.
ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿವಾದಕ್ಕೆ ತಡೆಯಾಗಿರುವುದೇ ಕಾಂಗ್ರೆಸ್. ಆದರೂ, ರಾಜ್ಯ ಭೇಟಿಯ ವೇಳೆ ಆ ವಿಚಾರ ಪ್ರಸ್ತಾಪ ಮಾಡಲಿಲ್ಲ. ರಾಹುಲ್ ಗಾಂಧಿ ಈ ವಿಚಾರದಲ್ಲಿ ವೌನಕ್ಕೆ ಶರಣಾಗಿದ್ದು ರಾಜ್ಯದ ರೈತರಿಗೆ ಬಗೆದ ದ್ರೋಹ ಎಂದು ಟೀಕಿಸಿದರು.