ದೋಗು ಪಾಣರ

Update: 2018-02-10 16:54 GMT

ಉಡುಪಿ, ಫೆ.10: ಜಿಲ್ಲೆಯ ಹಿರಿಯ ಜನಪದ ಕಲಾವಿದರಾದ ದೋಗು ಪಾಣರ ಅವರು ಕುಕ್ಕಿಕಟ್ಟೆ ಇಂದಿರಾನಗರದ ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 95 ವರ್ಷ ಪ್ರಾಯವಾಗಿತ್ತು.

ಎರಡು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ದೋಗು ಪಾಣರ ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸಂಜೆ ಬೀಡಿನಗುಡ್ಡೆಯಲ್ಲಿ ನಡೆಯಿತು.

ದೋಗು ಪಾಣರ ಅವರ ಪುತ್ರ ಸಾಧು ಪಾಣರ, ತಂದೆಯವರ ದೈವ ಸೇವೆಯನ್ನು ಮುಂದುವರಿಸುತಿದ್ದಾರೆ. ರಾಜನ್ ದೈವ ಸೇವೆಯಲ್ಲಿ ಸುದೀರ್ಘ ಕಾಲ ತೊಡಗಿಸಿಕೊಂಡಿರುವ ಅವರಿಗೆ ಹತ್ತಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅವರು ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿಗೂ ಭಾಜನ ರಾಗಿದ್ದಾರೆ.

ದೈವ ನರ್ತಕರಾಗಿ ಗುರುತಿಸಿಕೊಂಡಿದ್ದ ಅವರು ಬೀಡಿನಗುಡ್ಡೆ ಪಿಲಿ ಚಾಮುಂಡಿ, ಮೂಡು ಅಲೆವೂರು, ಪಡು ಅಲೆವೂರಿನ ಧೂಮಾವತಿ, ಉಡುಪಿ ಅನಂತೇಶ್ವರ ಕಲ್ಕುಡ ನೇಮ, ಕಲ್ಮಾಡಿಯ ಮೂಲಸ್ಥಾನದಲ್ಲಿ ಬಗ್ಗು ಪಂಜುರ್ಲಿ ಕೋಲ ಕಟ್ಟುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ