ಮನೆ ಬೀಗ ಮುರಿದು 200ಗ್ರಾಂ ಚಿನ್ನಾಭರಣ ಕಳ್ಳತನ
Update: 2018-02-10 23:14 IST
ಬೆಂಗಳೂರು, ಫೆ.10: ಮನೆಯ ಬೀಗಮುರಿದು ಸುಮರು 200ಗ್ರಾಂ ಚಿನ್ನಾಭರಣ ಹಾಗೂ 15 ಸಾವಿರ ರೂ. ನಗದನ್ನು ಕಳ್ಳರು ದೋಚಿರುವ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.
ಧರ್ಮಣ್ಣ ಗಾರ್ಡನ್ ನಿವಾಸಿ, ಕರೀಂಖಾನ್ ಎಂಬುವವರ ಮನೆಯಲ್ಲಿ ಕೃತ್ಯ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಶುಕ್ರವಾರ ರಾತ್ರಿ 9.30ಗಂಟೆ ಸುಮಾರಿಗೆ ವಾಪಾಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ಧಮೆ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.