ಬೆಂಗಳೂರು: ನೈಜೀರಿಯಾ ಪ್ರಜೆಯ ಬಂಧನ
Update: 2018-02-13 23:21 IST
ಬೆಂಗಳೂರು, ಫೆ.13: ನಕಲಿ ಪಾಸ್‌ಪೋರ್ಟ್ ಹೊಂದಿದ್ದಲ್ಲದೆ, ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಸಿಸಿಬಿ ಪೊಲೀಸರು ನೈಜೀರಿಯಾ ಮೂಲದ ಪ್ರಜೆಯನ್ನು ಬಂಧಿಸಿದ್ದು, ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ನೈಜೀರಿಯಾ ಪ್ರಜೆಯನ್ನು ಎಲ್ವಯಯೂರಿ ಫೆಲಿಕ್ಸ್ ಮಧುಕ ಎಂದು ಗುರುತಿಸಲಾಗಿದೆ. ಆರೋಪಿಯಿಂದ 55 ಗ್ರಾಂ ಮಾದಕ ದ್ರವ್ಯ, 3 ಮೊಬೈಲ್, ನಕಲಿ ಪಾಸ್‌ಪೋರ್ಟ್, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯು ಎರಡು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ಆ ಪೈಕಿ ಒಂದು ಪಾಸ್‌ಪೋರ್ಟ್ ನಕಲಿ ಎಂಬುದು ತನಿಖೆಯಿಂದ ಗೊತ್ತಾಗಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಇವುಗಳನ್ನು ಬಳಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.