ಬೆಂಗಳೂರು: ಪ್ರಮಾಣ ವಚನ ಬೋಧನೆ
Update: 2018-02-13 23:24 IST
ಬೆಂಗಳೂರು, ಫೆ. 13: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನೂತನ ಆಯುಕ್ತರುಗಳಾಗಿ ಎಸ್.ಎಲ್.ಪಾಟೀಲ್, ಎಚ್.ಪಿ.ಸುಧಾಮ್ ದಾಸ್, ಡಾ.ಕೆ.ಇ. ಕುಮಾರಸ್ವಾಮಿ ಹಾಗೂ ಡಾ.ಕೆ.ಲಿಂಗರಾಜ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು.
ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ನೂತನ ಆಯುಕ್ತರುಗಳಿಗೆ ಪ್ರಮಾಣವಚನ ಬೋಧಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.